ಕಲ್ಲು ಗಣಿಗಾರಿಕೆ ಪರವಾನಿಗೆ ನೀಡದಿರಲು ವಿರುದ್ಧ ಗೊಲ್ಲರಹಟ್ಟಿ ಗ್ರಾಮಸ್ಥರ ಹೋರಾಟಕ್ಕೆ ಸಿಗುತ್ತಾ ನ್ಯಾಯ!

ದೊಡ್ಡ ಗೊಲ್ಲರಹಟ್ಟಿ ಅಕ್ಟೋಬರ್.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಹೋಬಳಿಯ ಬಡೇಲಡಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದೊಡ್ಡ ಗೊಲ್ಲರಹಟ್ಟಿ ಗ್ರಾಮದ ಗ್ರಾಮಸ್ಥರು ಆಂತಕದ. ಭೀತಿಯಲ್ಲಿ ಇದ್ದರೆ ಅದು ಏನೆಂದರೆ ದೊಡ್ಡ ಗೊಲ್ಲರಹಟ್ಟಿ ಗ್ರಾಮಕ್ಕೆ ಆಂಟಿಕೊಂಡಿರುವ ಬಂಡೆ ಆಂಜನೇಯ ದೇವಸ್ಥಾನ ಇರುವ ಬಂಡೆ ಮಟ್ಟೇಯಂತಿರುವ ಸಣ್ಣ ಕಲ್ಲು ಗುಡ್ಡ ಮಾಜಿ ಸಚಿವರಾದ ಎನ್.ಎಂ ನಭೀ ಸಾಬ್ ನವರ ಪುತ್ರ ಎನ್. ಎಂ. ನೂರ್ ಅಹಮದ್ ರವರು ಕಲ್ಲು ಗಣಿಗಾರಿಕೆ ಮಾಡಲು ಅವರ ಹೆಸರಿಗೆ ದೊಡ್ಡ ಗೊಲ್ಲರಹಟ್ಟಿಯ ಪಕ್ಕದಲ್ಲಿರುವ ಬಂಡೆ ಆಂಜನೇಯನ ಕಲ್ಲು ಗುಡ್ಡದ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ,ಈ ಅರ್ಜಿಯನ್ನು ಯಾವುದೇ ಕಾರಣಕ್ಕೂ ಮಾನ್ಯ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಾವುಗಳು ಪರವಾನಿಗೆ ನೀಡದೆ ರದ್ದು ಗೊಳಿಸಬೇಕು ಎಂದು ಗ್ರಾಮಸ್ಥರ ಕೂಗಾಗಿದೆ. ಕಾರಣ ನಮ್ಮ ಗ್ರಾಮಕ್ಕೆ ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ಆ ಬಂಡೆಯ ಮೇಲೆ ಬಂಡೆ ಆಂಜನೇಯನ ಪಾದದ ಹೆಜ್ಜೆಯ ಗುರುತು ಇದೆ, ಅದನ್ನೇ ನಾವು ಕಾಲನೂ ಕಾಲದಿಂದಲೂ ಪೂಜೆ ಮಾಡಿ ದೇವರ ಆಶೀರ್ವಾದ ಪಡೆದುಕೊಂಡೆವು ಎಂಬ ನಂಬಿಕೆಯಲ್ಲಿ ನಾವು ಈ ದಿನಕ್ಕೂ ನಂಬಿಕೆಯಿಂದ ಜೀವನ ಮಾಡುತ್ತಿದ್ದೇವೆ ಎಂದು ಅಲ್ಲಿನ ಮಹಿಳೆಯರು ಹೇಳುತ್ತಿದ್ದಾರೆ, ಗ್ರಾಮದ ಎಲ್ಲಾ ಜನರಿಗೆ ಆತಂಕದ ಭೀತಿಗಳು : ನಮ್ಮ ಗ್ರಾಮದಲ್ಲಿನ ಗರ್ಭಿಣಿ ಮಹಿಳೆಯರಿಗೆ ಗ್ರಾಮದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಮಾಡಿದರೆ ಕಲ್ಲು ಬ್ಲಾಸ್ಟಿಂಗ್ ಶಬ್ದದಿಂದ ಮನೆಯಲ್ಲೇ ಇದ್ದ ಗರ್ಭಿಣಿ ಹೆಣ್ಣು ಮಕ್ಕಳಿಗೆ ತೊಂದರೆಗಳು ಉಂಟಾಗುವ ಸಂಭವವಿದೆ, ಹಾಗೂ ನಮ್ಮ ಗ್ರಾಮ ಚಿಕ್ಕ ಗ್ರಾಮ ಆಗಿರುವುದರಿಂದ ಕಲ್ಲು ಬಂಡೆ ಕೈಗೆ ಸಿಗುವಂತಹ ಅಂತರ ದಲ್ಲಿರುವುದರಿಂದ ಕಲ್ಲು ಗಣಿಗಾರಿಕೆ ಸ್ಪೋಟಕ ಮಾಡುವ ಸಂದರ್ಭದಲ್ಲಿ ಗ್ರಾಮಕ್ಕೆ ಅಂಟಿಕೊಂಡಿರುವ ಈ ಕಲ್ಲು ಬಂಡೆ ಸಣ್ಣ ಸಣ್ಣ ಕಲ್ಲುಗಳು ಮನೆಯ ಮೇಲೆ ಬೀಳುವವು ಹಾಗೂ ಶಾಲೆಯ ಮೇಲೆ ಬೀಳುವ ಸಂಭವವಿದೆ , ಎಂದು ತಿಳಿಸುತ್ತಾರೆ ಕಲ್ಲು ಗಣಿಗಾರಿಕೆ ಸ್ಫೋಟಕದಿಂದ ಮನೆಗಳು ಬಿರುಕು ಬಿಡುವ ಸಂಭವವಿದೆ ಮನೆಯಲ್ಲಿ ವಾಸಿಸುವಂತಹ ಜನರಿಗೆ ಕಲ್ಲು ಚೂರುಗಳು ಧನ ಕರಗಳು,ಕುರಿ, ಮೇಕೆ,ಕುರಿಗಳಿಗೆ,ಜನ ಜಾನುವಾರಗಳಿಗೆ ಸಿಡಿಯುವ ಕಲ್ಲುಗಳಿಂದ ಅಪಾಯ ಉಂಟಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ ದೊಡ್ಡ ಗೊಲ್ಲರಟ್ಟಿ ಪಕ್ಕದಲ್ಲಿರುವ ಕಲ್ಲು ಬಂಡೆಗೆ ಗಣಿಗಾರಿಕೆ ಮಾಡಲು ಅವಕಾಶ ಕೊಟ್ಟರೆ ನಮ್ಮ ಗ್ರಾಮದ ಸುತ್ತ ಮುತ್ತಲಿರುವ ಫಲವತ್ತತೆಯ ಭೂಮಿಗಳಿಗೆ ವಿಪರೀತ ಧೂಳಿನಿಂದ ಹಾಗೂ ನೀರಾವರಿ ಬೋರ್ವೆಲ್ ಗಳು ಸ್ಪೋಟಕದಿಂದ ಬೋರ್ವೆಲ್ ಒಳಗಡೆ ಕದಲಿ ಬೀಳಲಿದೆ ಹಾಗೂ ಎಲ್ಲಾ ಬೋರ್ವೆಲ್ ಗಳು ನೀರಾವರಿಯಿಂದ ರೈತರು ಜೀವನೋಪಾಯಕ್ಕೆ ಆಧಾರವಾಗಿರುವ ಬೋರ್ವೆಲ್ ಗಳು ಅಂತರ್ ಜಲ ಬರುವ ಸ್ಥಳದಲ್ಲಿ ಕದಲಿ ಬಿದ್ದು ಪಂಪು ಮೋಟಾರ್ ಗಳು ಭೂಮಿಯಲ್ಲಿ ಮುಚ್ಚಿಹೋಗುವ ಸಂಭವವಿದೆ ಎಂದು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ, ಈ ಕಲ್ಲು ಗಣಿಗಾರಿಕೆ ಪರವಾನಿಗೆ ನೀಡಿದ್ದಲ್ಲಿ ಹೆಚ್ಚು ಹೆಚ್ಚು ಸಮಸ್ಯೆಗಳು ಗ್ರಾಮಕ್ಕೆ ಉಂಟಾಗುತ್ತದೆ ಎಂದು ಸಣ್ಣ ಮಕ್ಕಳಿಂದ ಮುಪ್ಪಿನ ವಯಸ್ಸಿನ ಹಿರಿಯರವರೆಗೂ ಕುಪ್ಪನ ಕೇರಿ ಕಂದಾಯ ಗ್ರಾಮಕ್ಕೆ ಸೇರಿರುವ 340/ 4 ವಿಸ್ತೀರ್ಣ 6 ಎಕರೆ ಜಮೀನನ್ನು ಪರವಾನಿಗೆ ಪಡೆಯಲು ಯಾರೇ ಅರ್ಜಿ ಸಲ್ಲಿಸಿದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಹಾಗೂ ಸಂಬಂಧಪಟ್ಟಂತಹ ತಾಲೂಕು ಮತ್ತು ಜಿಲ್ಲಾದ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರ ಮೇಲೆ ಕಾಣಿಸಿದ ಸರ್ವೇ ನಂಬರ್ ನ ಅರ್ಜಿಗಳನ್ನು ರದ್ದುಗೊಳಿಸಿ ಜನರ ಜೀವವನ್ನು ಹಾಗೂ ದೊಡ್ಡ ಗೊಲ್ಲರಟ್ಟಿ ಗ್ರಾಮವನ್ನು ಉಳಿಸಿ ಎಂಬ ಹೋರಾಟದ ಮೂಲಕ ಗ್ರಾಮಸ್ಥರು ಕೊಟ್ಟೂರು ರಸ್ತೆಯ ಮೇಲ್ ಸೇತುವೆ ಸ್ಥಳದಿಂದ ಹೋರಾಟಗಾರರು ದೊಡ್ಡ ಗೊಲ್ಲರಟ್ಟಿ ಗ್ರಾಮದ ಪ್ರತಿ ಮನೆ ಮನೆಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಸೇರಿ ರ್ಯಾಲಿ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಬಂದು ಜಮಾಯಿಸಿ, ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಕೊಟ್ಟರು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಕಾಟೇರ್ ಹಾಲೇಶ್ ಹಾಗೂ ಊರಿನ ಮುಖಂಡರಾದ ಸಿದ್ದಪ್ಪ, ಬಾಲಪ್ಪ,ಕಾಳಪ್ಪ, ದೊಡ್ಡ ನಾಗಪ್ಪ,ಚಿತ್ತಮ್ಮ, ಮೀನಾಕ್ಷಿ,ಲಕ್ಷ್ಮಿ,ಮಲ್ಲಮ್ಮ, ದೊಡ್ಡಪ್ಪ,ಬಾಲರಾಜ, ನಿಂಗಪ್ಪ,ಲೋಕೇಶ, ಕಡ್ಲೆಮ್ಮ,ಬಸವರಾಜ, ಶಶಿಕುಮಾರ, ಗ್ರಾಮದ ಎಲ್ಲಾ ಮುಖಂಡರುಗಳು ಭಾಗಿಯಾಗಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button