ಬಡತನ…

ಬಡತನ ಎಲ್ಲವನ್ನೂ ಕಲಿಸುತ್ತದೆ..
ಅನ್ನದ ಬೆಲೆಯನ್ನು,
ಹಣದ ಬೆಲೆಯನ್ನು,
ಸಮಯದ ಬೆಲೆಯನ್ನು.
ಬಡತನ ಹೇಗಿರಬೇಕೆಂದು ಕಲಿಸುತ್ತದೆ.
ದೊಡ್ಡವರ ಮುಂದೆ ತಲೆ ತಗ್ಗಿಸುವುದನ್ನು,
ಚಿಕ್ಕವರೊಂದಿಗೆ ನಯಾವಿನಯದಿಂದಿರಬೇಕೆನ್ನುವುದನ್ನು,
ಹಿರಿಯರಿಗೆ ಗೌರವ ಕೊಡಬೇಕೆಂಬುದನ್ನು..
ಬಡತನ ವ್ಯಕ್ತಿತ್ವವನ್ನು ರೂಪಿಸುತ್ತದೆ,
ಶಿಕ್ಷಣಕ್ಕಿಂತ ಸಂಸ್ಕಾರ ದೊಡ್ಡದೆಂದು,
ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದೆಂದು,
ಮನುಜನಾಗಿ ಬಾಳಬೇಕೆಂದು..
ಬಡತನ ಎಲ್ಲವನ್ನೂ ಕಲಿಸುತ್ತದೆ,
ಈ ಬಡತನ ಎಲ್ಲರಿಗೂ ಎಲ್ಲವನ್ನೂ
ಕಲಿಸುತ್ತದೆ….
✍️ಕು.|| ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ. ವಿದ್ಯಾರ್ಥಿನಿ,
ಕೃಷಿ ಮಹಾವಿದ್ಯಾಲಯ ಕಲಬುರ್ಗಿ.