ಕೂಡ್ಲಿಗಿ – ಶಾಸಕ ಡಾll ಎನ್.ಟಿ.ಎಸ್ ರವರ ಅಧ್ಯಕ್ಷತೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಭೆ.
ಕೂಡ್ಲಿಗಿ ಅಕ್ಟೋಬರ್.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಜರುಗಿತು. ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರ, ಅಧ್ಯಕ್ಷತೆಯಲ್ಲಿ. ರಾಷ್ಟ್ರೀಯ ಹಬ್ಬಗಳ ಆಚರಣೆಯ ಅಧ್ಯಕ್ಷರು, ಹಾಗೂ ಕೂಡ್ಲಿಗಿಯ ನೂತನ ತಹಶೀಲ್ದಾರರಾದ ಶ್ರೀಮತಿ ಟಿ.ವಿ.ರೇಣುಕರವರ ಉಪಸ್ಥಿತಿಯಲ್ಲಿ. ಕೂಡ್ಲಿಗಿ ತಾಲೂಕಾಢಳಿತ ಹಾಗೂ ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ, ಅ.28 ರಂದು ಜರುಗಲಿರುವ 2023-24 ನೇ ಸಾಲಿನ. ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ, ಪೂರ್ವಭಾವಿ ಸಭೆ ಅ.13 ರಂದು ಪಟ್ಟಣದ ಪ್ರವಾಸಿ ಮಂದಿರಲ್ಲಿ ಜರುಗಿತು. ತಾಲೂಕ ಪಂಚಾಯ್ತಿ ಇ.ಓ – ವೈ. ರವಿಕುಮಾರ, ಕೂಡ್ಲಿಗಿ ಸಿಪಿಐ ಸುರೇಶ್ ತಳವಾರ, ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ್ ಭಾಷ, ತಾಲೂಕು ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ್ ಪಾಲ್ತೂರ, ಶ್ರೀ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಸುರೇಶ ವೇದಿಕೆಯಲ್ಲಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರ್ಣಂ ಸೇರಿದಂತೆ, ವಿವಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು. ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಮಾತನಾಡಿ,

ಪ್ರಸಕ್ತ ವರ್ಷ ರಾಜ್ಯದಲ್ಲಿ, ಬರಗಾಲ ಇರುವುದರಿಂದಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು. ಸರಳವಾಗಿ ಆಚರಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ, ಮುಂದಿನ ದಿನಗಳಲ್ಲಿ ಕೂಡ್ಲಿಗಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ನಿರ್ಮಿಸಲು. ಸರ್ಕಾರದ ಮೇಲೆ ಪ್ರಭಾವ ಬೀರಲಾಗುವುದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಬರಗಾಲ ಆವರಿಸಿರುವ ಕಾರಣ, ಸರ್ಕಾರದಿಂದ ನಮ್ಮ ತಾಲೂಕಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗುವುದೆಂದರು. ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಕೆ ಈಶಪ್ಪ , ಬಾಸು ನಾಯ್ಕ , ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ , ಹಿರೇ ಕುಂಬಳಗುಂಟೆ ಉಮೇಶ್ , ಮಾದಿಹಳ್ಳಿ ನಜೀರ್ ಸಾಬ್ , ಮರಭ ವೀರಭದ್ರಗೌಡ , ಜುಮ್ಮೋಬನಹಳ್ಳಿ ಜಿ .ಓಬಣ್ಣ , ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಾಣದ ಶಿವಮೂರ್ತಿ , ನಾರಾಯಣ ಗುನ್ನಳ್ಳಿ , ಬಣಕಾರ ಮೂಗಪ್ಪ , ಸಿಪಿಐ ಮುಖಂಡ ಎಸ್. ವೀರಣ್ಣ , ಸಿದ್ದಾಪುರ ಬಿ.ಎಮ್. ಈಶ್ವರಪ್ಪ , ಲಿಂಬ್ಯಾ ನಾಯ್ಕ್ ಸೇರಿದಂತೆ ಮತ್ತಿತರರು. ಪಟ್ಟಣ ಸೇರಿದಂತೆ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು, ವಿವಿದ ಸಂಘ ಸಂಸ್ಥೆ ಪದಾಧಿಕಾರಿಗಳು. ನಾಗರಿಕರು ಹಾಗೂ ಗಣ್ಯರು, ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ