ವಿಜ್ರಂಭಣೆಯಿಂದ ಸೊನ್ನಮರಡಿ ಶ್ರೀ ವೀರಭದ್ರೇಶ್ವರ – ಸ್ವಾಮಿ ರಥೋತ್ಸವ.
ಹೊನ್ನಮರಡಿ ಡಿ.18





ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹುಲಿಕೆರೆ ಹೊರ ವಲಯದ ಹೊನ್ನಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ರಥದ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ ಬಾಳೆಹಣ್ಣು. ಉತ್ತುತ್ತಿ. ಮಂಡಕ್ಕಿ. ಎಸೆದು ಭಕ್ತಿ ಸಮರ್ಪಿಸಿದರು.

ಶ್ರೀ ಸ್ವಾಮಿಯ ಪಟ್ಟವನ್ನು ಹುಲಿಕೆರೆ ಗ್ರಾಮದ ದಾಸಪ್ಪರ ತಿಪ್ಪೇಸ್ವಾಮಿ ಇವರಿಗೆ ರೂಪಾಯಿ 65.000. ಕ್ಕೆ ಪಡೆದು ಕೊಂಡರು. ಇದೇ ಸಂದರ್ಭದಲ್ಲಿ ಹುಲಿಕೆರೆ ಹಿರೇ ಕುಂಬಳಗುಂಟೆ ದಾಸರು ಬನಹಳ್ಳಿ ಹೊಸಹಳ್ಳಿ ಜಗಳೂರು ಮೊಳಕಾಲ್ಮುರು ಸೇರಿ ಇತರೆ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮದ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ