ವೀರಪಣ್ಣ ಕಬ್ಬೇರ ಹೃದಯಾಘಾತದಿಂದ ನಿಧನ.
ಹುನಗುಂದ ಅಕ್ಟೋಬರ್.16

ಪಟ್ಟಣದ ಮೇಗಲಪೇಟಿಯ ನಿವಾಸಿ ಜಿರೋ ಟು ಹೀರೋ ಕೋಚಿಂಗ್ ಸೆಂಟರ್ ಶಿಕ್ಷಕ ವೀರಪಣ್ಣ ಗದ್ದೆಪ್ಪ ಕಬ್ಬೇರ (೩೯) ರವಿವಾರ ಬೆಳಗ್ಗೆ ೯ ಗಂಟೆಯ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.ಇವರು ಮೂಲತಃ ರಾಯಚೂರ ಜಿಲ್ಲೆಯ ಲಿಂಗಸಗೂರ ತಾಲೂಕಿನ ಮರಗಂಟನಾಳ ಗ್ರಾಮ ನಿವಾಸಿಯಾಗಿದ್ದರು.ಕಳೆದ ನಾಲ್ಕು ವರ್ಷದಿಂದ ಹುನಗುಂದ ಪಟ್ಟಣದ ದರಗಾದ ಓಣಿಯಲ್ಲಿ ಜಿರೋ ಟು ಹಿರೋ ಕೋಚಿಂಗ್ ಸೆಂಟರ್ ನಡೆಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಇವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು.ಹಠಾತನೇ ಹೃದಯಾಘಾತದಿಂದ ನಿಧನರಾಗಿದ್ದು.ಮೃತರಿಗೆ ಪತ್ನಿ,ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ