ವಾಲ್ಮೀಕಿ ಜಯಂತಿ ಆಚರಿಸೋಣ – ಡಾ. ಕಾಂತರಾಜ್
ತರೀಕೆರೆ ಅಕ್ಟೋಬರ್.17

ಪ್ರತಿ ಬಾರಿಯಂತೆ ಈ ಬಾರಿಯೂ ಸಹ ವಾಲ್ಮೀಕಿ ಸಮಾಜದವರು ಸಂಘ ಸಂಸ್ಥೆ ಸಹಕಾರದೊಂದಿಗೆ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸೋಣ ಎಂದು ಉಪ ವಿಭಾಗಾಧಿಕಾರಿಯಾದ ಡಾ. ಕಾಂತರಾಜ್ ರವರು ಇಂದು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕರೆಯಲಾಗಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದಿನಾಂಕ 28-.10.-2023 ರಂದು ಬೇಡರ ಕಣ್ಣಪ್ಪ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆಯೊಂದಿಗೆ ಸಾಗಿ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಜಯಂತಿ ನಡೆಸುವುದು ಎಂದು ಹೇಳಿದರು. ಸಭೆಯಲ್ಲಿ ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ರಾಜೀವ ಮತ್ತು ಪುರಸಭಾ ಅಧ್ಯಕ್ಷರಾದ ಪರಮೇಶ್, ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ಉಪ ವಿಭಾಗಾಧಿಕಾರಿಯ ಕಚೇರಿ ತಹಶೀಲ್ದಾರ್ರಾದ ಸಂಗಮೇಶ್ ನಲ್ಲಿಗೆರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್, ದೈಹಿಕ ಶಿಕ್ಷಣ ಪರೀಕ್ಷಕರಾದ ಎಂ ಪ್ರಕಾಶ್, ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಗೋವಿಂದಪ್ಪ, ಪೈಲ್ವಾನ್ ಗೋವಿಂದಣ್ಣ, ಸಮಾಜ ಸೇವಕರಾದ ಎಂ ನರೇಂದ್ರ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ