ಕೂಡ್ಲಿಗಿ ಪ್ರ.ನಾ.ಹೋ. ಸಮಿತಿಯಿಂದ ವಿಜಯನಗರ ದಿಂದ ಬೆಂಗಳೂರು ವರೆಗೆ ಪಾದಯಾತ್ರೆ – ತಹಶೀಲ್ದಾರ್ ರಿಗೆ ಪತ್ರ.
ಕೂಡ್ಲಿಗಿ ಅಕ್ಟೋಬರ್.18
ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿವಿಧ ಹಕ್ಕೊತ್ತಾಗಳನ್ನು ಈಡೇರಿಸುವಂತೆ, ಒತ್ತಾಯಿಸಿ ಪ್ರಜಾಪ್ರಭುತ್ವ ನಾಗರಿಕರ ಹೋರಾಟ ಸಮಿತಿಯ ಪದಾಧಿಕಾರಿಗಳು. ತಮ್ಮ ಪ್ರಮುಖ ಹಕ್ಕೋತ್ತಾಯಗಳನ್ನು. ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ, ವಿಜಯನಗರ (ಹೊಸಪೇಟೆ)ದಿಂದ ಬೆಂಗಳೂರಿನ ವಿಧಾನ ಸೌಧದವರಿಗೆ. ಪಾದಯಾತ್ರೆ ಮೂಲಕ ಸಂಚರಿಸಿ, ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಗಳನ್ನು ಈಡೆರಿಸುವಂತೆ. ರಾಜ್ಯದ ಮುಖ್ಯಮಂತ್ರಿಗಳಿಗೆ, ಹಾಗೂ ಸಂಬಂಧಿಸಿದ ಇಲಾಖಾ ಸಚಿವರಿಗೆ ನೀಡಲಿದ್ದಾರೆ. ಪಾದಾಯಾತ್ರೆಯಲ್ಲಿ ಒಟ್ಟು ಐದು ಜನ ಸಮಿತಿ ಸದಸ್ಯರಿದ್ದು ಅವರೆಲ್ಲರೂ ವಿಕಲ ಚೇತನರಾಗಿದ್ದಾರೆ. ಅವರು ಅ.16 ರಂದು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ, ಬೆಂಗಳೂರು ಕಡೆ ರಾ.ಹೆ 50.ರಸ್ತೆಯ ಮೂಲಕ ಪಾದಾಯಾತ್ರೆ ಪ್ರಾರಂಭಿಸಿದ್ದಾರೆ. ಅ.17 ರಂದು ಕೂಡ್ಲಿಗಿ ಪಟ್ಟಣ ಪ್ರವೇಶಿಸಿದ್ದು, ಪಟ್ಟಣ ಪಂಚಾಯ್ತಿ ಸದಸ್ಯರಾದ ಹೆಚ್.ಎಮ್. ಸಚಿನ್ ಕುಮಾರ ಸೇರಿದಂತೆ. ಪ.ಪಂ ಸದಸ್ಯ ಸಿರಿಬಿ ಮಂಜಯನಾಥ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪೂರ್ಯನಾಯ್ಕರವರು. ಸಮಿತಿಯ ಪಾದಾಯಾತ್ರಿಕರನ್ನು ಅತ್ಮೀಯವಾಗಿ, ಪಟ್ಟಣಕ್ಕೆ ಸ್ವಾಗತಿಸಿ ಕೊಂಡಿದ್ದಾರೆ.ನಂತರ ಅವರು ತಹಶೀಲ್ದಾರರು ಕಚೇರಿಗೆ ತೆರಳಿ, ಕೂಡ್ಲಿಗಿ ತಾಲೂಕಿನ ಸಮಾನ ಮನಸ್ಕರ ಪರವಾಗಿ. ಸಮಿತಿ ಸದಸ್ಯರು ತಮ್ಮ ಜೊತೆಗಿದ್ದ ಪ.ಪಂ ಸದಸ್ಯರ ನೇತೃತ್ವದಲ್ಲಿ, ತಹಶೀಲ್ದಾರರಿಗೆ ತಮ್ಮ ಹಕ್ಕೊತ್ತಾಯಗಳ ಪತ್ರ ನೀಡಿದ್ದು. ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ, ಕೂಡ್ಲಿಗಿ ನಾಗರಿಕರು ಹಾಗೂ ಸಮಸ್ತ ಜನತೆಯ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವ ನಾಗರಿಕ ಹೋರಾಟ ಸಮಿತಿಯ, ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರರು ಅನುಪಸ್ಥಿತಿಯಲ್ಲಿ ಶೀರಸ್ಥೆದಾರರು ಸ್ವೀಕರಿಸಿದರು. ನಂತರ ಸಮಿತಿಯ ಸದಸ್ಯರು ತಮ್ಮ ಪಾದಯಾತ್ರೆಯನ್ನು, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ. ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ, ಬೆಂಗಳೂರಿನತ್ತ ತೆರಳಲು ಮುನ್ನಡೆದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ