ಕಾನಾ ಹೊಸಹಳ್ಳಿ ನಾಡ ಕಚೇರಿಗೆ ನೂತನ ತಹಶೀಲ್ದಾರ್ ಎಂ.ರೇಣುಕಾ ಭೇಟಿ.
ಕಾನಾ ಹೊಸಹಳ್ಳಿ ಅಕ್ಟೋಬರ್.19

ಇಲ್ಲಿನ ನಾಡ ಕಚೇರಿಗೆ ನೂತನ ತಹಶೀಲ್ದಾರ್ ತಾಲೂಕ ದಂಡಾಧಿಕಾರಿ ಎಂ.ರೇಣುಕಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೂತನ ತಹಶೀಲ್ದಾರರಿಗೆ ನಾಡ ಕಚೇರಿಯಿಂದ ಗೌರವ ಸನ್ಮಾನಿಸಿದರು. ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕಾನ ಹೊಸಹಳ್ಳಿ ನಾಡ ಕಚೇರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಅಧಿಕಾರಿಗಳಿಗೆ ಈ ಕಿವಿ ಮಾತು ಹೇಳಿದರು. ಅಧಿಕಾರಿಗಳು ಒಂದು ತಂಡವಾಗಿ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕೆಲಸ ನಿರ್ವಹಿಸಬೇಕು, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅವರನ್ನು ಕಾಯಿಸಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಂದಾಯ ಪರೀಕ್ಷಕರಾದ ಮುರಳಿ ಕೃಷ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯ, ಸಂಪ್ರೀತ, ಚೈತ್ರ, ಅನಿತಾ, ಜ್ಯೋತಿ ಹಾಗೂ ಗ್ರಾಮ ಸಹಾಯಕರಾದ ಶಾಂತರಾಜ್, ಬೋರಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್ ಕಾನಹೊಸಹಳ್ಳಿ