ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ.
ಹೂಡೇಂ ಅಕ್ಟೋಬರ್:19

ಸಮೀಪದ ಹೂಡೇಂ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ ಬಾಲ್ಯ ವಿವಾಹ ಮತ್ತು ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ರಾಮಚಂದ್ರಪ್ಪ ಮಾತನಾಡಿ ಬಾಲ್ಯ ವಿವಾಹ ಕೇವಲ ಕುಟುಂಬಕ್ಕೆ ಸಂಕಷ್ಟ ತರುವುದು ಮಾತ್ರವಲ್ಲ ಸಮುದಾಯದಲ್ಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಗಳು ಹೆಣ್ಣುಮಕ್ಕಳು 18 ವರ್ಷದ ನಂತರ ಮತ್ತು ಗಂಡು ಮಕ್ಕಳು 21 ವರ್ಷದ ನಂತರ ವಿವಾಹವಾಗಲು ಯೋಗ್ಯರೆಂದು ಘೋಷಿಸಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ಲಕ್ಷ್ಮಿಬಾಯಿ ಮಾತನಾಡಿ, ಬಾಲ್ಯ ವಿವಾಹ ಅಪರಾಧಕ್ಕೆ ಜೈಲುಶಿಕ್ಷೆ, ದಂಢ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷವಾದ ಬಳಿಕ ವಿವಾಹ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ಗ್ರಂಥಾಲಯದ ಮೇಲ್ಚಾಲಕರಾದ ಗುರುರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ತಿಪ್ಪೇರುದ್ರಪ್ಪ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ, ನಾಗರತ್ನಮ್ಮ, ಆಶಾ ಕಾರ್ಯಕರ್ತೆಯರು ನಾಗವೇಣಿ, ನಾಗಮ್ಮ, ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಸಿಬ್ಬಂದಿಗಳು, ಮಹಿಳಾ ಸಂಘ ಸಂಸ್ಥೆಯವರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್ ಕಾನ ಹೊಸಹಳ್ಳಿ