“ಪೈಕಾ” ಚಲನ ಚಿತ್ರದ ಟೈಟಲ್ ಅನಾವರಣ.
ಹುಬ್ಬಳ್ಳಿ ಅಕ್ಟೋಬರ್.20

ಮೈ ಡ್ರೀಮ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ‘ಪೈಕಾ’ ಎಂಬ ವಿನೂತನ ಶೀರ್ಷಿಕೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಎದುರಿಗೆ ಬರಲು ಸಾಜ್ಜಾಗುತ್ತಿದೆ ಹೊಸ ಚಿತ್ರ ತಂಡ. ಸಂತೋಷ್ ವೆರ್ಣೇಕರ ರವರ ನೇತೃತ್ವದಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ‘ಸವಿಗಾನ’ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿ ಅವರ ಅಮೃತ ಹಸ್ತದಿಂದ ‘ಪೈಕಾ’ ಚಿತ್ರದ ಟೈಟಲ್ ಅನಾವರಣ ಗೊಂಡಿತು. ಈ ಸಂದರ್ಭದಲ್ಲಿ ರವೀಂದ್ರ ರಾಮದುರ್ಗಕರ, ಸಂತೋಷ ಶೆಟ್ಟಿ ಚಿತ್ರ ತಂಡದ ಕಲಾವಿದರು ,ಪ್ರಮುಖರು ಪಾಲ್ಗೊಂಡಿದ್ದರು. ಹಿರಿಯ ಜೀವಿ ಗಂಗಮ್ಮ ಗಚ್ಚಿನಮನೆ ಎಂಬ ಕಲಾ ಆರಾಧಕಿಯು ಈ ಸಿನೆಮಾಗೆ ಬಂಡವಾಳ ಹೂಡುತ್ತಿದ್ದು, ಕಲಾ ಆರಾಧನೆಗೆ ವಯಸ್ಸು ಅಡ್ಡಿಯಾಗದು ಎಂಬುದನ್ನು ಗಂಗಮ್ಮ ನಿರೂಪಿಸಲು ಹೊರಟಿದ್ದಾರೆ. ನವ ನಿರ್ದೇಶಕ ರಮೇಶ್ರ ಅವರೊಡನೆ ಅನುಭವಿ ತಂತ್ರಜ್ಞರನ್ನು ಸೇರಿಸಿಕೊಂಡು ಚಿತ್ರ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಗಂಗಮ್ಮ. ಈ ಚಿತ್ರಕ್ಕೆ ಮನ್ವರ್ಷಿ ನವಲಗುಂದ ಅವರ ಸಾಹಿತ್ಯ, ವಿಕಾಸ್ ರಜತ್ ಸಂಗೀತವಿದೆ, ಹಿನ್ನೆಲೆ ಸಂಗೀತ ಮನ್‌ದೀಪ್, ಛಾಯಾಗ್ರಹಣ ದೇವು, ಚಂದ್ರು ಬಂಡೆ ಸಾಹಸ, ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಗಿರವರ ಪತ್ರಿಕಾ ಸಂಪರ್ಕ, ಪ್ರಚಾರಕಲೆ ದೊಡ್ಡ ಆಲಹಳ್ಳಿಯ ವಿಶ್ವಅಮರ್ ಅವರದಿದೆ. ಗಂಗಮ್ಮ ಗಚ್ಚಿನಮನೆ ಅವರ ಜೊತೆ ಸಹ ನಿರ್ಮಾಪಕರು ರಮೇಶ್ ಎಸ್ ಇದ್ದಾರೆ. ಕಥೆ-ಚಿತ್ರಕಥೆ ನಿರ್ದೇಶನವನ್ನು ರಮೇಶ್ ಎಸ್ ಹೊತ್ತಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳ ಆಯ್ಕೆ ನಡೆದಿದ್ದು ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕಿ ಗಂಗಮ್ಮ ಹೇಳುತ್ತಾರೆ.
**
ವರದಿ:ಡಾಪ್ರಭು ಗಂಜಿಹಾಳ
ಮೊ: 9448775346