ಬರ ಪರಿಹಾರ ಸರ್ಕಾರ ನೀಡುತ್ತಿದೆ – ಜಿ.ಎಚ್. ಶ್ರೀನಿವಾಸ್.

ತರೀಕೆರೆ ಅಕ್ಟೋಬರ್.21

ಬೆಟ್ಟದಲ್ಲಿ ಗ್ರಾಮದ ಮಧ್ಯೆ ಹಾದು ಹೋಗುವ ರಸ್ತೆ ಎರಡು ಕಡೆ ಚರಂಡಿ ಮತ್ತು ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಕೃಷಿ ಇಲಾಖೆ ಮೂಲಕ ಬರ ಪರಿಹಾರವನ್ನು ಸರ್ಕಾರ ನೀಡುತ್ತಿದೆ ಎಂದು ಶಾಸಕರಾದ ಜಿ ಎಚ್ ಶ್ರೀನಿವಾಸ್ ಹೇಳಿದರು ಅವರು ಇಂದು ಬೆಟ್ಟದಹಳ್ಳಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು ಜನರ ಸಮಸ್ಯೆಗಳನ್ನು ಅವರ ಬಳಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಬಗೆ ಹರಿಸುತಿದ್ದೇವೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು. ಉಪ ವಿಭಾಗ ಅಧಿಕಾರಿ ಡಾ. ಕಾಂತರಾಜ್ ರವರು ಮಾತನಾಡಿ ರೈತರ ಮೂಲಭೂತ ಸಮಸ್ಯೆಗಳಾದ ಪಹಣಿಯಲ್ಲಿ ವ್ಯತ್ಯಾಸವಾಗಿರುವುದು, ವಿಸ್ತೀರ್ಣದಲ್ಲಿ ಕಡಿಮೆ,ಹೆಚ್ಚಳ ಆಗಿರುವ ಸಾಧ್ಯತೆ ಇದ್ದಲ್ಲಿ ಹಾಗೂ ಪೌತಿ ಖಾತೆಗಳ ಬದಲಾವಣೆ ಮತ್ತು ಕ್ರಯ ಪತ್ರಕ್ಕೆ ಬದ್ಧವಾಗಿ ಆರ್.ಟಿ.ಸಿ ಆಕಾರ್ ಬಂದ್,ನೀಡಿ ಬದಲಾವಣೆ ಮಾಡಿಕೊಳ್ಳಬಹುದು. ವಿಧವಾ ವೇತನ, ವೃದ್ಧಾಪ್ಯ ವೇತನ, ಮಾಶಾಸನ ಬರದೇ ಇದ್ದಲ್ಲಿ ಸರಿ ಪಡಿಸಲಾಗುವುದು. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ಕಟ್ಟಿ ಕೊಂಡಿರುವವರು 94 ಸಿ ಅಡಿಯಲ್ಲಿ ಅರ್ಜಿ ಕೊಟ್ಟಿದ್ದರೆ ಮನೆ ನಿವೇಶನ ಮಂಜೂರಾತಿ ಮಾಡಿಕೊಡಲಾಗುತ್ತದೆ. ಬೆಟ್ಟದಹಳ್ಳಿ ಸರ್ವೆ ನಂಬರ್ 42 ರಲ್ಲಿ ರೈತರು ಮಣ್ಣು ಒಡೆದು ಕೊಳ್ಳಲು ಅರಣ್ಯ ಇಲಾಖೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ ರೈತರ ಸಮಸ್ಯೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭದ್ರಾವತಿಯ ಡಿಎಫ್ಓ ರವರ ಬಳಿ ಮಾತನಾಡಿ ಸಮಸ್ಯೆ ತುರ್ತಾಗಿ ಬಗೆ ಹರಿಸಲಾಗುವುದು, ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೆಎಸ್ಆರ್ಟಿಸಿ ಬಸ್ಸುಗಳನ್ನು ನಿಗದಿತ ಸಮಯಕ್ಕೆ ವ್ಯವಸ್ಥೆ ಮಾಡಲಾಗುವುದು. ಬೆಟ್ಟದಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಪಿಡಿಒ ಮಂಜಪ್ಪನವರು ಹೇಳಿದರು. ತಹಸೀಲ್ದಾರ್ ರಾಜೀವ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಯೋಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗೇಶ್, ಉಪಾಧ್ಯಕ್ಷರಾದ ನವೀನ್ ಕುಮಾರ್, ಉಪಸ್ಥಿತರಿದ್ದು, ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು, ಜನರ ಸಮಸ್ಯೆಗಳನ್ನು ಅವಾಲಹಗಳನ್ನು ಶೀರಸ್ತೆದಾರರಾದ ನಾಗೇಂದ್ರ ನಾಯಕ, ರಾಜಸ್ವ ನಿರೀಕ್ಷಕರಾದ ರೇವಣ್ಣ, ಗ್ರಾಮ ಲೆಕ್ಕಾಧಿಕಾರಿ ಧನಂಜಯ, ಹಾಗೂ ಸಂಜಯ್ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಮಂಜಪ್ಪರವರು ಸ್ವಾಗತಿಸಿ, ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button