ಮಹಿಳಾ ಸಂಘಗಳಿಗೆ ಸರ್ಕಾರದ ಸಾಲ ಸೌಲಭ್ಯ:ಸಾಲ ಸದ್ಭಳಕೆ ಮಾಡಿಕೊಳ್ಳಿ – ಖಾಜಾಸಾಬ.
ಹುನಗುಂದ ಅಕ್ಟೋಬರ್.22

ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಜೀವನವನ್ನು ನಡೆಲು ಸರ್ಕಾರ ಸಾಕಷ್ಟು ಸಾಲ ಸೌಲಭ್ಯಗಳನ್ನು ಮಹಿಳಾ ಸಂಘಗಳಿಗೆ ನೀಡುತ್ತಿದೆ.ಅದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಖಾಜಾಸಾಬ ಹೇಳಿದರು.ತಾಲೂಕಿನ ಸಮೀಪದ ನಾಗೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಕಾರ್ಯಾಲಯದಲ್ಲಿ ನಡೆದ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಿ ಮಾತನಾಡಿದ ಅವರು ಇಂದು ಮಹಿಳೆಯರು ಆರ್ಥಿಕ ಸಬಲತೆಗೆ ಮತ್ತು ಸಾವಲಂಬಿ ಜೀವನಕ್ಕೆ ಅನುಕೂಲತೆಗೆ ಸರ್ಕಾರ ಆರ್ಥಿಕ ಸಹಕಾರವನ್ನು ನೀಡುತ್ತಿದೆ.ತಗೆದುಕೊಂಡ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಮರು ಪಾವತಿಸಬೇಕು ಎಂದರು.ಈ ಸಂದರ್ಭದಲ್ಲಿ ಕೆವಿಜಿ ಬ್ಯಾಂಕ್ ಸಿಬ್ಬಂದಿಗಳಾದ ವೆಂಕಟೇಶ ಯಡಹಳ್ಳಿ,ಕೆ.ಸುರೇಶ ಕುಮಾರ,ಡಿ.ಡಿ.ಅನೀಲಕುಮಾರ, ವಿಜಯಲಕ್ಷ್ಮೀ ಪೂಜಾರಿ,ಗ್ರಾ.ಪಂ ಸದಸ್ಯ ನೀಲಗಂಗವ್ವ ನರಗುಂದ,ಮಹಿಳಾ ಸಂಘದ ಸದಸ್ಯರಾದ ಬಸಮ್ಮ ಬಳಿಗಾರ,ಪ್ರಭಾವತಿ ನರಗುಂದ,ಬಸವ್ವ ದೇಶೆಟ್ಟಿ,ರೇಣವ್ವ ನರಗುಂದ,ಕಮಲಾಕ್ಷಿ ಹೊಸಗೌಡ್ರ,ಲಕ್ಷಿಬಾಯಿ ನರಗುಂದ,ಲಲಿತಾ ಗೌಡರರ,ಬಸವ್ವ ಸಿಂಗಾಡಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ