ಕರಡಿ ಧಾಮಕ್ಕೆ ವೀಕ್ಷಣೆಗೆ ತಮಿಳುನಾಡು ಅರಣ್ಯಾಧಿಕಾರಿಗಳ ತಂಡ ಭೇಟಿ.
ಗುಡೇಕೋಟೆ ಅಕ್ಟೋಬರ್.22

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿ ಧಾಮಕ್ಕೆ ದಾಮಕ್ಕೆ ತಮಿಳುನಾಡಿನ ಅರಣ್ಯಾಧಿಕಾರಿಗಳ ತಂಡ ಗುಡೇಕೋಟೆ ವಲಯ ಅರಣ್ಯಕ್ಕೆ ಭೇಟಿ ನೀಡಿ ಇಲ್ಲಿನ ಪರಿಸರ ಮತ್ತು ಸಸ್ಯ ಪ್ರಬೇಧಗಳು ಜೀವ ಸಂಕುಲಗಳ ಅದ್ಯಾಯನಕ್ಕಾಗಿ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ತಂಡ ವಿಜಯನಗರ ಜಿಲ್ಲಾ ವ್ಯಾಪ್ತಿಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಎರಡನೇ ಗುಡೇಕೋಟೆ ಕರಡಿ ಧಾಮದ ಸೌಂದರ್ಯ ಸವಿಯಲು ಆಗಮಿಸಿದೆ. ಬೆಳಿಗ್ಗೆ ಯಿಂದಲೇ ಬಿರು ಬಿಸಿಲಿನಲ್ಲಿ ಚಾರಣಕ್ಕೆ ಹೊರಟ ತಂಡಕ್ಕೆ ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ್ ರವರು ತಮಿಳುನಾಡಿನಿಂದ ಆಗಮಿಸಿರುವ ಅಧಿಕಾರಿಗಳನ್ನು ಸ್ವಾಗತಿಸಿ ಕರಡಿ ಧಾಮದ ಪರಿಚಯ ಇಲ್ಲಿನ ಎಲ್ಲಾ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ತೋರಿಸಿ ಈ ನೆಲದ ವಿಶೇಷತೆ ಬಗ್ಗೆ ಹಾಗೂ ಪ್ರಾಣಿ ಪಕ್ಷಿಗಳ ಚಲನ ವಲನಗಳ ಕುರಿತು ಮನವರಿಕೆ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಪಿ ಮಹೇಶ್, ಮುಖ್ಯಮಂತ್ರಿ ಪದಕ ವಿಜೇತ ಹೆಚ್.ವೆಂಕಟೇಶ್ ನಾಯ್ಕ, ಶ್ರೀಧರ, ವೆಂಕಟೇಶ್, ಯೋಗಾನಂದ, ಹೊನ್ನೂರು ಸ್ವಾಮಿ,ನಾಗರಾಜ್,ಗುರುಬಸವರಾಜ್, ಮಲ್ಲಿಕಾರ್ಜುನ,ಚಾಲಕ ಕೃಷ್ಣ, ಸೇರಿದಂತೆ ತಮಿಳುನಾಡಿನ ಅರಣ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ