ಶಿಶು ಅಭಿವೃದ್ಧಿ ಯೋಜನೆ ಇಂಡಿ ವತಿಯಿಂದ “ಪಾಲಕರ ಸಭೆ”.
ಇಂಡಿ ಡಿಸೆಂಬರ್.16

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಇಂದು ತಿಂಗಳದ 3 ಶನಿವಾರ ತಾಲೂಕಾ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಮಾಳಿಂಗರಾಯ ದೇವಾಲಯದಲ್ಲಿ ಪಾಲಕರ ಸಭೆ ಕಾಯ೯ಕ್ರಮ ಆಯೋಜಿಸಲಾಗಿತ್ತು.ಈ ಸಭೆಯ ಅಧ್ಯಕ್ಷತೆಯನ್ನು ಇಂಡಿ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಯಲ್ಲಪ್ಪ ಹದರಿಯವರ ನೇತೃತ್ವದಲ್ಲಿ ಜರುಗಿತು.ಇವರು ಸಭೆಯನ್ನುದ್ದೇಶಿಸಿ -ಪ್ರತಿಯೋವ೯ ಮಗುವಿಗೆ ಶಿಕ್ಷಣ ಬಹಳ ಪ್ರಾಮುಖ್ಯವಾಗಿದೆ.”ಇಂದಿನ ಮಕ್ಕಳೇ ನಾಳಿನ ಪ್ರಜೆಗಳು”ಎಂಬಂತೆ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸ ಬೇಕು.ಇಲ್ಲಿ ಮಕ್ಕಳಿಗೆ ,ಗಭಿ೯ಣಿಯರಿಗೆ , ಬಾಣಂತಿಯರಿಗೆ, ಉತ್ತಮ ಪೌಷ್ಠಿಕ ಆಹಾರವನ್ನು ಕೊಡಲಾಗುತ್ತದೆ.ಇದರ ಸದುಪಯೋಗ ಪಾಲಕರು ಪಡೆದು ಕೊಳ್ಳಬೇಕು . ಮತ್ತು ಪೋಷಕರು ಮಕ್ಕಳ ಬಗ್ಗೆ ಅಂಗನವಾಡಿಗಳಲ್ಲಿ ಕಲಿಯುತ್ತಿರುವ ಚಟುವಟಿಕೆಗ ಕುರಿತು ಗಮನ ವಹಿಸಬೇಕು ಈ ರೀತಿ ತಿಂಗಳಿಗೊಮ್ಮೆ ಪಾಲಕರ ಸಭೆ ಮಾಡುವುದರಿಂದ ಮಕ್ಕಳ ಕಲಿಕೆ ಉತ್ತಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇಂಡಿ ಶ್ರೀಮತಿ ಗೀತಾ ಗುತ್ತರಗಿಮಠ ಇವರು ಮಾತನಾಡಿ-ಮಕ್ಕಳ ಸವಾ೯ಂಗೀಣಿ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ.ಇದು ಶಾಲಾ ಪೂವ೯ ಶಿಕ್ಷಣ ಕೇಂದ್ರದಂತೆ ಕಾಯ೯ ನಿವ೯ಹಿಸುತಿದ್ದು, ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಅವರ ಆಸೆ-ಆಕಾಂಕ್ಷೆಗಳಿಗೆ ಅನುಗುಣವಾಗಿ ಮಕ್ಕಳಲ್ಲಿ ಪ್ರತಿಭೆ ಹೊರ ಹೊಮ್ಮಿಸುವುದರ ಜೊತೆಗೆ ಅವರ ಮಾನಸಿಕ,ದೈಹಿಕವಾಗಿ,ಸದೃಢವನ್ನಾಗಿ ,ಅನೇಕ ಕಾರ್ಯ ಚಟುವಟಿಕೆಗಳನ್ನು ಕಲಿಯುವಂತೆ ಮಾಡಿಸಲಾಗುತ್ತದೆ.”ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬಂತೆ ಮಕ್ಕಳು ಎಲ್ಲಾ ಮಕ್ಕಳೊಂದಿಗೆ ಬೆರೆಯುವುದನ್ನು ಮಗು ಇಲ್ಲಿ ಕಲಿತು ಕೊಳ್ಳಲು ಅವಕಾಶವಿದೆ.ಮಕ್ಕಳಿಗೆ ದೈಹಿಕ ಅಂಗವೈಕಲ್ಯ ಇರುವುದು ಇಲ್ಲಿ ಗುರುತಿಸಿ,ಸರಿಯಾದ ಚಿಕಿತ್ಸೆಯನ್ನು ಕೊಡಲಾಗುವುದು.ಅಷ್ಟೇ ಅಲ್ಲದೆ ಇಲಾಖೆಯ ಅನೇಕ ಯೋಜನೆಗಳ ಸದುಪಯೋಗಗಳನ್ನು ಪಡೆದು ಕೊಳ್ಳಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕಾಯ೯ ಕ್ರಮದ ನಿರೂಪಣೆಯನ್ನು ಶ್ರೀಮತಿ ಟಿ.ಎಮ್.ಭಜಂತ್ರಿಯವರು ನಿವ೯ಹಿಸಿದರು.ಸ್ವಾಗತವನ್ನು ಶ್ರೀಮತಿ ರೂಪಾ ಜಿ ಗಬ್ಬೂರರವರು ಮಾಡಿದರು.ಸಭೆಯಲ್ಲಿ ಪುರಸಭೆಯ ಸದಸ್ಯರಾದ ಶ್ರೀ ಶ್ರೀ ಶೈಲ ಪೂಜಾರಿ.ಸುಜಾತ ಪಾಟೀಲ.ಪೋಷಕರಾದ ಮೈರೂನಬಿ ಇಂಡಿಕರ.ಮೇಲ್ವೀಚಾರಕೀಯರಾದ ಶ್ರೀ ಮತಿ ಪಿ.ಎಮ್.ಭಜಂತ್ರಿ.ಅಂ.ಕಾಯ೯ ಕತೆ೯ಯರಾದ ಶ್ರೀಮತಿ ಬಿ.ಎಸ್.ಕುರತ್ತಳ್ಳಿ. ಶ್ರೀಮತಿ ಪಿ.ಎ.ಕುಂಬಾರ. ಶ್ರೀಮತಿ ಎಸ್.ಬಿ.ಅವಟಿ. ವಂದನಾರ್ಪಣೆಯನ್ನು ಶ್ರೀಮತಿ ಬಿ.ಎಸ್.ಕುರತ್ತಳ್ಳಿಯವರು ಮಾಡಿದರು.ಹಾಗೂ ಅನೇಕ ಮಕ್ಕಳು,ಪಾಲಕರು ಈ ಕಾಯ೯ ಕ್ರಮದಲ್ಲಿ ಭಾಗವಹಿಸಿದರು.ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ