“ಸಡಗರ ಸಂಭ್ರಮದಿಂದ ಸ್ವಾಮಿಯ ಪಲ್ಲಕ್ಕಿ ಉತ್ಸವ”.

ಕೊಟ್ಟೂರು ಅಕ್ಟೋಬರ್.24

ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯ ದಶಮಿ ಹಬ್ಬ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಮಂಗಳವಾರ ಸಂಜೆ ಅಂತಿಮ ತೆರೆ ಕಂಡಿತು.ದಸರಾ ನಿಮಿತ್ಯ ಪಟ್ಟಣದಲ್ಲಿನ ಕೋಟೆ ಬಾಗದ ಊರಮ್ಮನ ದೇವಸ್ಥಾನ, ಕಾಳಮ್ಮದೇವಿ ದೇವಸ್ಥಾನ, ಬನಶಂಕರಿ, ನೇಕಾರ ಕಾಲೋನಿಯ ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀರಾಮ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು.ಕೊನೆಯ ದಿನವಾದ ಮಂಗಳವಾರ ರಂದು ದಸರಾ ಹಬ್ಬದ ಅಂಗವಾಗಿ ಶ್ರೀ ಗುರು ಬಸವೇಶ್ವರ ಸ್ವಾಮಿಯ ಬೆಳ್ಳಿ  ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಸಾಗಿತು. ಅಕ್ಟರ್ ಬಾದ್ ಶಾಹ ನೀಡಿದ್ದ ಖಡ್ಗವನ್ನು ಪಲ್ಲಕ್ಕಿಯಲ್ಲಿ ಇರಿಸಲಾಗಿತ್ತು.

ಕ್ರಿಯಾ ಮೂರ್ತಿಗಳಾದ ಆರ್.ಎಂ.ಪ್ರಕಾಶ್ ಸ್ವಾಮಿ  ಕೊಟ್ಟೂರು ದೇವರು ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಿರೇಮಠದಿಂದ ಮಂಗಳವಾರ ಸಂಜೆ 4.30ಕ್ಕೆ ಆರಂಭಗೊಂಡಿತು.ಈ ದಸರಾ ಮಹೊತ್ಸವ ತೇರು ಬಜಾರ್ ಮೂಲಕ ಸಾಗಿ ಹ್ಯಾಳ್ಯಾ ರಸ್ತೆಯಲ್ಲಿನ ಬನ್ನಿಕಟ್ಟೆಗೆ ತಲುಪಿ ಬನ್ನಿ ಮಹಾಕಾಳಿ ದೇವತೆಗೆ ಪೂಜೆಯು ನೆರವೇರಿಸಿ ಸಾವಿರಾರು ಭಕ್ತರು ಪಲ್ಲಕ್ಕಿಯಲ್ಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಬನ್ನಿ ತೆಗೆದುಕೊಂಡು ದಸರಾ ಹಬ್ಬಕ್ಕೆ ಮೆರುಗು ಮೂಡಿತು.ದಸರಾ ಹಬ್ಬದ ಸ್ವಾಮಿಯ ಮಹೋತ್ಸವವದುದ್ದಕ್ಕೂ ಸಮಳ, ನಂದಿಕೋಲು ಮತ್ತಿತರ ವಾದ್ಯಗಳ ನೀನಾದ ಅದ್ದೂರಿಯ ಈ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ಬನ್ನಿ ಕಟ್ಟೆಗೆ ಸಂಜೆ 5.ರ ಸುಮಾರಿನಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಶ್ರೀ ಸ್ವಾಮಿಗೆ ಜೈಕಾರಗಳನ್ನು ಹಾಕಿ ನಮಿಸಿದರು. ಕೊಟ್ಟೂರು ದೈವಸ್ತರ ಪರವಾಗಿ ಸಂಪ್ರದಾಯದಂತೆ ಬನ್ನಿ ಮಹಾಕಾಳಿ ದೇವತೆಗೆ ಕುಂಕುಮ, ಅಕ್ಷತೆ, ಪುಷ್ಪ, ಫಲ ತಾಂಬುಲಗಳೊದಿಗೆ ದೇವಸ್ಥಾನದ ಬಳಗ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬನ್ನಿ ಮಹಾಕಾಳಿಗೆ ಒಕ್ಕಣಿಯ ಪತ್ರ ಬರೆದು ಪಟ್ಟಣದ ಜನತೆಯ ಕಾಣಿಕೆಯನ್ನು ಸ್ವೀಕರಿಸಿ ಸರ್ವರಿಗೂ ಒಳಿತು ಮಾಡುವಂತೆ ಕೋರಿ ಬರೆದ ಪತ್ರವನ್ನು ಶ್ಯಾನು ಭೋಗರು ಈ ಸಂದರ್ಭದಲ್ಲಿ ಓದಿ ಮರಕ್ಕೆ ಕಟ್ಟಿದರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬನ್ನಿ ವಿತರಿಸುವ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button