ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿ ಮಾಡಿ.
ತಾಯಕನಹಳ್ಳಿ ಅಕ್ಟೋಬರ್.25





ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಾಗಿ ಮಕ್ಕಳಿಗೆ ಶೈಕ್ಷ ಣಿಕವಾಗಿ ಉತ್ತಮ ಶಿಕ್ಷ ಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಶಾಲೆಯ ಸಂಸ್ಥಾಪಕರಾದ ಮಂಜುನಾಥ್ ತಿಳಿಸಿದರು. ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಜ್ಞಾನ ದೀಪ ನವೋದಯ ಶಾಲೆಯ 2022-23ನೇ ಸಾಲಿನಲ್ಲಿ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಸಾಧ್ಯ ಎಂದು ಸನ್ಮಾನಿಸಲಾಯಿತು, ಮಕ್ಕಳಿಗೆ ಒತ್ತಡ ಮುಕ್ತ ಶಿಕ್ಷಣ ನೀಡಿದಲ್ಲಿ ಮಾತ್ರ ಮಕ್ಕಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಲು ಸಾಧ್ಯ. ಪ್ರತಿ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೂಡೇಂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರಪ್ಪ ವಹಿಸಿದರು, ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪ್ಯಾರಿಮಾಬಿ ಘನಿಸಾಬ್, ಸದಸ್ಯರಾದ ಕೆಎನ್ ರಾಘವೇಂದ್ರ, ಕುಮಾರ್ ಹಾಗೂ ಸ.ಪ್ರೌ ಶಾಲೆ ಮುಖ್ಯ ಶಿಕ್ಷಕರಾದ ರಂಗಪ್ಪ, ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಪಾಲಯ್ಯ, ಶಿಕ್ಷಕರಾದ ರವಿಕುಮಾರ್, ಮಾಜಿ ಅಧ್ಯಕ್ಷ ಉಮಾ ಮಹೇಶ್ವರ, ಕೆಂಚಲಿಂಗಪ್ಪ, ಶೇಖರಪ್ಪ, ಗಿರೀಶ್, ಪ್ರಕಾಶ್, ಶಿಕ್ಷಕರಾದ ಶಿಲ್ಪ, ಸುಧಾ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ