ಕಾನಾ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ.
ಕಾನಾ ಹೊಸಹಳ್ಳಿ ಅಕ್ಟೋಬರ್.25





ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಪೊಲೀಸ್ ಠಾಣೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಠಾಣೆಯ ವಾಹನಗಳನ್ನು ಮತ್ತು ಪೊಲೀಸ್ ಪೇದೆಗಳ ದ್ವಿಚಕ್ರ ವಾಹನಗಳನ್ನು ತೊಳೆದು ಪೂಜಿಸಿ ಹೂಮಾಲೆ ಹಾಕಿ ಸಿಂಗರಿಸಲಾಗಿತ್ತು. ನಂತರ ಠಾಣೆಯಲ್ಲಿ ಮಂಟಪವನ್ನು ನಿರ್ಮಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಭಾವ ಚಿತ್ರವನ್ನು ಇಟ್ಟು ಹೂಮಾಲೆಗಳಿಂದ ಸಿಂಗರಿಸಲಾಗಿತ್ತು. ಠಾಣೆಯಲ್ಲಿರುವ ಎಲ್ಲಾ ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ದೇವಿಯ ಮುಂಭಾಗದಲ್ಲಿಟ್ಟು ಪೂಜಿಸಿ ಕುಂಕುಮ ಹೂವು ಹಣ್ಣು ಹಂಪಲುಗಳಿಂದ ಸಿಂಗರಿಸಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶ್ರೀ ಚಾಮುಂಡೇಶ್ವರಿ ದೇವಿಗೆ ಹಾಗೂ ಠಾಣೆಯ ಉಪಕರಣಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿ ಸಲ್ಲಿಸುವುದರ ಮೂಲಕ ದಸರಾ ಹಬ್ಬದ ಆಯುಧ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಪಿಎಸ್ಐ ಎಚ್. ನಾಗರತ್ನಮ್ಮ, ಎಎಸ್ಐ ಗೋವಿಂದಪ್ಪ, ಎ ಎಸ್ ಐ . ಜಿಲಾನ್ ಭಾಷಾ, ಸಿಬ್ಬಂದಿಗಳಾದ ಶ್ರೀಮತಿ ಜ್ಯೋತಿ,ಪಾರ್ವತಿ, ಮಹಾಂತೇಶ್,ಜಗದೀಶ್, ಹಾಲೇಶ್ ರವಿ ಗೌಡ, ಮಂಜುನಾಥ, ಸಿದ್ದಲಿಂಗಪ್ಪ, ಸೇರಿದಂತೆ ಸಿಬ್ಬಂದಿ ವರ್ಗ ಇತರರು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ