“ಇತಿಹಾಸದಲ್ಲಿ ಮಹತ್ವ ಪ್ರಾಮುಖ್ಯತೆ l ಮಹರ್ಷಿ ವಾಲ್ಮೀಕಿ ರಾಮಾಯಣಕ್ಕೆ l ಕಾರ್ತಿಕ ವಿ. ತಹಶೀಲ್ದಾರ್”.

ಕೊಟ್ಟೂರು ಅಕ್ಟೋಬರ್.29

ತಾಲೂಕಿನ ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ  ಇಲಾಖೆ, ಕೂಡ್ಲಿಗಿ ಇವರ ಸಹಕಾರದೊಂದಿಗೆ ತಾಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.ವೀರಭದ್ರಪ್ಪ ಕೋಡಿಹಳ್ಳಿ ಶಿಕ್ಷಕರು ಮಹರ್ಷಿ ವಾಲ್ಮೀಕಿ ಹಾಗೂ ನಾಯಕ ಸಮುದಾಯ ದೇಶಕ್ಕಾಗಿ, ಸಮಾಜಕ್ಕಾಗಿ ಮತ್ತು ಈ ಸಮಾಜವು ವಿಜಯಪುರ ಜಿಲ್ಲೆ ಮುಧೋಳ್ ತಾಲೂಕಿನ  ಹಲಗಲಿ ಗ್ರಾಮದ ನಾಲ್ಕು ಜನ ಬೇಡರ ಪಡೇ ತಮ್ಮ ಆಯುಧಗಳು ಗೋಸ್ಕರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಸಿದ ಮೊದಲ ಗ್ರಾಮವಾಗಿದೆ ಎಂದರೆ ತಪ್ಪಾಗಲಾರದು ಎಂದು ಈ ಬಗ್ಗೆ ವಿಶೇಷವಾಗಿ  ಉಪನ್ಯಾಸ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು,  ಹಾಗೂ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾರ್ತಿಕ.ವಿ ತಹಶೀಲ್ದಾರರು  ಮಾತನಾಡಿ ಉತ್ತಮ ಸಮಾಜಕ್ಕೆ ಮುಂದಿನ ಪೀಳಿಗೆಗೆ ರಾಮಾಯಣ ಬಗ್ಗೆ ತಿಳಿಯಬೇಕಾಗಿದೆ ಮತ್ತು ನಮ್ಮ ಭಾರತ ದೇಶವು ವಿವಿಧ ಭಾಷೆಯ ಆಚಾರ ವಿಚಾರ ಧರ್ಮದಿಂದ ಕೂಡಿದ ದೇಶವಾಗಿದ್ದು ಸಂವಿಧಾನದ ಅಡಿಯಲ್ಲಿ ಎಲ್ಲಾ ಸಮುದಾಯಗಳು ಒಗ್ಗಟ್ಟಿನಿಂದ ಹೋಗಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್, ಪಟ್ಟಂ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಎಡಿ ನರೇಗಾ ವಿಜಯಕುಮಾರ್, ಶರಣಪ್ಪ ಸೊಬರದ ಕಛೇರಿ ಅಧೀಕ್ಷಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೂಡ್ಲಿಗಿ, ಅಂಜಿನಪ್ಪ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು. ಪಕ್ಕೀರಪ್ಪ, ಹೆಚ್ ಕೊಟ್ರೇಶ್, ನಾಗರಾಜ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆಂಗರಾಜ, ಕನ್ಸಲರ್ ಪಟ್ಟಣ ಪಂಚಾಯಿತಿ, ತೆಗ್ಗಿನಕೇರಿ ಕೊಟ್ರೇಶ್, ಡಿಎಸ್್್ಎಸ್್ಟ ಮುಖಂಡರು, ಪಿ ನಾಗರಾಜ ಕಾರ್ಯದರ್ಶಿ ವಾಲ್ಮೀಕಿ ಸಂಘ ಕೊಟ್ಟೂರು, ಬಿ ಪಿ ತಿಪ್ಪೇಸ್ವಾಮಿ, ಜಿ ಸಿದ್ದಪ್ಪ ಸ ನೌ ಸಂ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ,ಅಜ್ಜಪ್ಪ ಸಿ, ಶಶಿಧರ ಮೈದೂರು ಹಾಗೂ ಸಮಾಜದ ಮುಖಂಡರು, ನೌಕರರ ವರ್ಗದವರು ಹಾಜರಿದ್ದರು.  ಸಿ ಮ ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ. ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button