ಕಾರ್ಮಿಕರು. ದೀನ ದಲಿತರು ಕೃಷಿ ಕೂಲಿಕಾರರು ಪರವಾಗಿ l ಸಿ.ಪಿ.ಐ.ಎಂ.ಎಲ್ ಪಕ್ಷ ಕೆಲಸ ಮಾಡಲು ಸದಾ ಸಿದ್ದ l ರಾಜ್ಯ ಕಾರ್ಯದರ್ಶಿ-ಕ್ಲಿಫ್ಟನ್.

ಕೊಟ್ಟೂರು ಅಕ್ಟೋಬರ್.29

ವಿಜಯನಗರ ಜಿಲ್ಲಾ ಸಮ್ಮೇಳನ ಕಾರ್ಯಕ್ರಮವನ್ನು ತಾಲೂಕಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಿಪಿಐ (ಎಂಎಲ್) ಲಿಬರೇಷನ್ ಪಕ್ಷವು  ಭಾನುವಾರದಂದು  ಹಮ್ಮಿಕೊಳ್ಳಲಾಗಿತ್ತು.ನಂತರ ಪಕ್ಷದ ರಾಜ್ಯ ಮಟ್ಟದ ಮುಖಂಡರಾದ ಮಣಿ ಕಾಮ್ರೇಡ್ ಮಾತನಾಡಿ ತಾಲೂಕಿಗೆ ಬೇಕಾದ ಮೂಲಭೂತ ಆಡಾಳಿತಾತ್ಮಕ ಕಛೇರಿಗಳು ಇಲ್ಲದೆ ಮೂಲಭೂತವಾಗಿ ಬಿ ಇ ಓ ಆಫೀಸ್ ,ಸರ್ಕಾರಿ ಡಿಗ್ರಿ ಕಾಲೇಜ್,ಕೋರ್ಟ್ ಎಲ್ಲಾ ಗ್ರಾಮಾಂತರ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಮತ್ತು  ತಿಂಗಳಿಗೆ 15000/ ಪ್ರೋತ್ಸಾಹಧನ  ಸಾಲ ಸೌಲಭ್ಯ ನೀಡಲು ಒತ್ತಾಯ,ಸಬ್ ರಿಜೆಸ್ಟ್ ಕಛೇರಿಗಳು ,ಖಾಸಗಿ ಶಾಲೆಯ ಡೊನೇಷನ್ ಹಾವಳಿ ತಡೆಗಟ್ಟುವುದು,ಕೊಟ್ಟೂರಿಗೆ ಶಾಶ್ವತ ನಿರಾವರಿ ಯೋಜನೆಗಳು, ಕೊಟ್ಟೂರು ಹರಪನಹಳ್ಳಿ ಹಗರಿಬೊಮ್ಮನಹಳ್ಳಿ ಸರ್ವಮತ ಕಾಲದ ಕನಿಷ್ಠ 20 ಚಿಕ್ಕ ಡ್ಯಾಮ್ ನಿರ್ಮಿಸಬೇಕು, ಕೊಟ್ಟೂರು -ಮೈಲಾರ -ಉಜ್ಜಿನಿ- ಗಣಗಟ್ಟೆ -ಉಚ್ಚಂಗಿದುರ್ಗ ಗ್ರಾಮಗಳಲ್ಲಿ  ಕೃಷಿ ಕೂಲಿಕಾರ ಭಕ್ತರಿಗೆ ತಂಗುದಾಣ ನೀಡಬೇಕು. ಮತ್ತು ಉಚಿತ ಶೌಚಾಲಯ ಹಾಗೂ ಸ್ನಾನದ ವ್ಯವಸ್ಥೆ ಸೌಲಭ್ಯ ಕಲ್ಪಿಸಬೇಕು, ವಿಜಯನಗರ ಜಿಲ್ಲೆಯ ಹೊಸಪೇಟೆಯನ್ನು ಹೊರತುಪಡಿಸಿ ಉಳಿದ ತಾಲೂಕುಗಳನ್ನು ಶಾಶ್ವತವಾಗಿ ಅತಿವೃಷ್ಟಿ. ಅನಾವೃಷ್ಟಿ ಎಂದು ಘೋಷಣೆ ಮಾಡಿ ಪ್ರತಿ ರೈತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳನ್ನು ರೈತ ಸಂಚಿತನಿಧಿ ಎಂದು ಸ್ಥಾಪಿಸಬೇಕು ಮತ್ತು ಕಾಫಿ ಎಸ್ಟೇಟ್ ಗಳಿಗೆ ಗುಳ್ಳೆ ಹೋಗುವುದನ್ನು ತಪ್ಪಿಸಬೇಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿಕೂಲಿ ಹಾಳಿಗೆ 1000 ರೂಪಾಯಿ ಕೂಲಿ ಹೆಚ್ಚಿಸಬೇಕು ಮತ್ತು ಒಂದು ತಿಂಗಳ ಕೂಲಿಯನ್ನು ಅಡ್ವಾನ್ಸ್ ನೀಡತಕ್ಕದ್ದು. ಹಾಗೂ ಪ್ರತಿ ನರೇಗಾ ಕೂಲಿ ಹಾಳಿಗೆ ಬ್ಯಾಂಕ್ ಸಾಲ ಸೌಲಭ್ಯವನ್ನು ಭದ್ರತೆ ಇಲ್ಲದೆ ನೀಡತಕ್ಕದ್ದು, ವಿಜಯನಗರ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಗರ್ಭಗುಡಿಯವರಿಗೆ ಎಲ್ಲಾ ಜಾತಿ ಜನಾಂಗದವರಿಗೆ ಪ್ರವೇಶ ನೀಡಲಿ, ದೇವದಾಸಿ ಪದ್ಧತಿ ನಿರ್ಮೂಲನೆ ಆಗಲಿ, ಮೈಕ್ರೋ ಫೈನಾನ್ಸ್ ಮತ್ತು ದೊಡ್ಡ-ದೊಡ್ಡ ಫೈನಾನ್ಸ್ ಗಳ ಮೂಲಕ ರೈತರಿಗೆ ಕಿರುಕುಳ ನೀಡುವಂತವರಿಗೆ ಕಾನೂನಿನಲ್ಲಿ ಶಿಕ್ಷೆ ಆಗಬೇಕು, ಪ್ರತಿ ಗ್ರಾಮವನ್ನು ಒಂದು ಯೂನಿಟ್ ಎಂದು ಗುರುತಿಸಿ ಉಚಿತ ಸೌರ ವಿದ್ಯುತ್ ನ್ನು ಮತ್ತು ಗಾಳಿ ವಿದ್ಯುತ್ತನ್ನು ಉಚಿತವಾಗಿ ನೀಡತಕ್ಕದ್ದು, ಇನ್ನೂ ಅನೇಕ ಸಮಸ್ಯೆಗಳನ್ನು ಸರ್ಕಾರಕ್ಕೆ ಜಿಲ್ಲಾ ಸಮ್ಮೇಳನ ಮೂಲಕ ಹೇಳಿದರು.ನಂತರ ವಿಜಯನಗರ ಪ್ರಥಮ ಜಿಲ್ಲಾ  ಸಮ್ಮೇಳನ ಕೊಟ್ಟೂರು ದಿನ ದಲಿತರ ಪರವಾಗಿ ಮತ್ತು ಕೂಲಿ ಕಾರ್ಮಿಕರು, ಕೃಷಿ ಕೂಲಿ ಕಾರರು ಪರವಾಗಿ ನಮ್ಮ ಸಿಪಿಐಎಂಎಲ್ ಪಕ್ಷ ಕೆಲಸ ಮಾಡಲು ಸದಾ ಸಿದ್ದ  ಮತ್ತು  ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಮಣಿ ಮತ್ತು ಇದ್ಲಿ ರಾಮಪ್ಪ ಇವರ ಸಮ್ಮುಖದಲ್ಲಿ ನೂತನ ಸಮಿತಿ ರಚನೆಗೆ ವಿಜಯನಗರ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಸಂಧ್ಯಾರ  ಪರಶುರಾಮ ಆಯ್ಕೆ ಮಾಡಲಾಯಿತುಈ ಸಂದರ್ಭದಲ್ಲಿ  ದೇವಕ್ಕ ವಕೀಲರು, ಲಲಿತಮ್ಮ ಅಕ್ಕಮ್ಮ, ಗುಡದಯ್ಯ ,ಕ್ರಾಂತಿ ಕಾರಿ ಯುಕರ ಸಂಘದ ಜಿಲ್ಲಾ ಇನಾಚ್ರಾಜ್ ಮಲ್ಲಿಕಾರ್ಜುನ,ಕೊಟ್ಟೂರ ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ಹರಪನಹಳ್ಳಿ ತಾಲೂಕು ಕಾರ್ಯದರ್ಶಿ ಬಾಲಗಂಗಾಧರ  ಕೊಟ್ಟೂರು ತಾಲೂಕು ಸಮಿತಿ ಹರಪನಹಳ್ಳಿ ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೊಟ್ -1ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಮಾತನಾಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಇಡೀ ಭಾರತದಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಮತ್ತು ದೀನ ದಲಿತರ ,ಕೂಲಿ ಕಾರ್ಮಿಕರು, ಕೃಷಿ ಕೂಲಿಕಾರರು ಪರವಾಗಿ ಕೆಲಸ ಮಾಡಲು ಸದಾ ಸಿದ್ದ ಇರುತ್ತವೆ. ಎಂದು ಹೇಳಿದರು.

ಕೊಟ್ -2ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಪಟ್ಟಣದಲ್ಲಿ ಸಂಘಟನೆಗೆ ಘಟಕವನ್ನು ಮಾಡುವುದು ಮತ್ತು ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆಯಲ್ಲಿ 5000 ಸದಸ್ಯರನ್ನು ನಮ್ಮ ಪಕ್ಷದಲ್ಲಿ ಮಾಡುತ್ತೇನೆ ಎಂದು ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಅವರು ಹೇಳಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button