ಕರ್ನಾಟಕ ಈಶಾನ್ಯ ಪದವೀಧರರು ಮತ ಕ್ಷೇತ್ರದ ಮತದಾರರ ನೋಂದಣಿಗೆ ವಿಶೇಷ ಅಭಿಯಾನ.
ಕೊಟ್ಟೂರು ಅಕ್ಟೋಬರ್.30

ಕರ್ನಾಟಕ ಈಶಾನ್ಯ ಪದವೀಧರರ ಮತ ಕ್ಷೇತ್ರದ ಮತದಾರರ ವಿಶೇಷ ನೋಂದಣಿ ದಿನವಾದ ಇಂದು ತಹಶೀಲ್ದಾರರಾದ ಕಾರ್ತಿಕ.ವಿ ಇವರು ಪಟ್ಟಣದ ಕೊಟ್ಟೂರೇಶ್ವರ ಕಾಲೇಜು , ಸರ್ಕಾರಿ ಪಿ ಯು ಕಾಲೇಜು ಹಾಗೂ ಸನ್ನಿಧಿ ಕಾಲೇಜಿಗೆ ಭೇಟಿ ನೀಡಿ ಪದವಿ ಮುಗಿಸಿದ ಉಪನ್ಯಾಶಕರು ಹಾಗೂ ಸಿಬ್ಬಂದಿ ವರ್ಗದವರಿಂದ ಭರ್ತಿ ಮಾಡಿಸಿದ ನಮೂನೆ-18 ರ ಅರ್ಜಿಗಳನ್ನು ಸ್ವೀಕರಿಸಿದರು. ದಿನಾಂಕ: 06.11.2023 ಕೊನೆಯ ದಿನವಾಗಿದ್ದು, ಅರ್ಹ ಪದವೀಧರರು ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ದಿನಾಂಕ: 01.11.2020 ಕ್ಕಿಂತ ಹಿಂದೆ ಪದವೀಧರ ರಾಗಿರುವವರು ನಮೂನೆ-18ರ ಅರ್ಜಿಯನ್ನು ಭರ್ತಿ ಮಾಡಿ 2 ಭಾವ ಚಿತ್ರ, ಪದವಿಯ ಅಂಕಪಟ್ಟಿ, ವಿಳಾಸದ ಗುರುತಿನ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯ(ವೋಟರ್ ಐಡಿ) ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಕೊಟ್ಟೂರು ಇವರಿಗೆ ಸಲ್ಲಿಸುವಂತೆ ಕಾರ್ತಿಕ.ವಿ ಇವರು ಕೋರಿದರು.

ವಿಶೇಷ ನೋಂದಣಿ ಜಾಗೃತಿ ಜಾಥದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ತಾಲೂಕು ಪಂಚಾಯಿತಿ ಎಡಿ ನರೇಗಾ ಹೆಚ್ ವಿಜಯಕುಮಾರ್, ಕೊಟ್ಟೂರೇಶ್ವರ ಕಾಲೇಜಿನ ಪ್ರಾಚಾರ್ಯರಾದ ರವಿಕುಮಾರ್, ಉಪನ್ಯಾಸಕರಾದ ರವೀಂದ್ರಗೌಡ, ಪೃಥ್ವಿರಾಜ್, ಸ್ವೀಪ್ ಅಧಿಕಾರಿ ಶಶಿಧರ ಮೈದೂರು, ಶಿಕ್ಷಣ ಇಲಾಖೆಯ ಅಜ್ಜಪ್ಪ ಸಿ . ಡಿ ಶಿವಕುಮಾರ್ ಹಾಗೂ ಇತರರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು