ಉದ್ದ ಜಿಗಿತ ವಿಭಾಗದಿಂದ ಎಂ. ಸಂಜನಾ ಇವರು ರಾಜ್ಯ ಮಟ್ಟಕ್ಕೆ ಆಯ್ಕೆ.

ಹಿರೇಹೆಗ್ಡಾಳ್ ಅಕ್ಟೋಬರ್.31

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಎಂ ಸಂಜನಾ ಉದ್ದ ಜಿಗಿತ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜಯನಗರ ಜಿಲ್ಲಾ ಮಟ್ಟದ 2023 24 ನೇ ಸಾಲಿನ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟ ತಾಲೂಕಾ ಕ್ರೀಡಾಂಗಣ ಹರಪನಹಳ್ಳಿಯಲ್ಲಿ. ದಿನಾಂಕ 26 ಅಕ್ಟೋಬರ್ 2023 ರಂದು ನಡೆದ ಕ್ರೀಡಾ ಕೂಟದಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆಯ ಹಿರೇಹೆಗ್ಡಾಳ್ ಗ್ರಾಮದ 10.ನೇ ತರಗತಿ ವಿದ್ಯಾರ್ಥಿನಿ. ಕುಮಾರಿ ಎಂ ಸಂಜನಾ ಎಂ ವೀರೇಶ್. ಇವರು ಉದ್ದ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ .ಹಾಗೂ ಕುಮಾರಿ ಎಂ.ಜಿ.ಅನುಷಾ 9.ನೇ ತರಗತಿ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ .ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವ ಎಂ ಸಂಜನಾ ಇವರಿಗೆ ಇವರ ಸಾಧನೆಗೆ ಪ್ರೌಢ ಶಾಲೆಯ ಮುಖ್ಯ ಗುರುಗಳು ಪಿ. ಡಿ.ರಂಗಪ್ಪ ಹಾಗೂ ದೈಹಿಕ ಶಿಕ್ಷಕರಾದ ಎ. ಎಂ. ಪ್ರಭುದೇವಯ್ಯ. ಎಸ್‌.ಡಿ.ಎಂ.ಸಿ .ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಎಲ್ಲಾ ಶಿಕ್ಷಕರ ಸಿಬ್ಬಂದಿ ವರ್ಗದವರು ಶಾಲಾ ವಿದ್ಯಾರ್ಥಿಗಳು ಗ್ರಾಮದ ಸರ್ವ ಮುಖಂಡರು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪಿಡಿ ರಂಗಪ್ಪ ಮುಖ್ಯ ಗುರುಗಳು ಮಾತನಾಡಿ ಎಂ ಸಂಜನಾ ಇವರಿಗೆ ಧನ್ಯವಾದಗಳು ತಿಳಿಸುತ್ತಾ ನಮ್ಮ ಶಾಲೆ ನಮ್ಮ ಕೀರ್ತಿ ಸಂಜನಾ ಇವರು ರಾಜ್ಯ ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಉದ್ದ ಜಿಗಿತ ಕ್ರೀಡೆಯಲ್ಲಿ ಭಾಗವಹಿಸಲಿ ಎಂದು ಹಾರೈಸಿದರು. ಹಾಗೂ ಪ್ರೌಢಶಾಲೆಯ ಅಚ್ಚುಮೆಚ್ಚಿನ ದೈಹಿಕ ಶಿಕ್ಷಕರಾದ .ಎ. ಎಂ. ಪ್ರಭುದೇವಯ್ಯ ಮಾತನಾಡಿ ಸಂಜನಾ ಇವರದು ಒಂದು ದೊಡ್ಡ ಸಾಧನೆ ಅಂತ ಹೇಳಬಹುದು .ನಮ್ಮ ಶಾಲೆಗೆ ಆಶಾಕಿರಣ ಇದ್ದಂತೆ. ಇವರು ಉದ್ಧ ಜಿಗಿತ ಕ್ರೀಡೆಯಲ್ಲಿ ಭಾಗವಹಿಸಿ. ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದು ನಮಗೆ ತುಂಬಾ ಖುಷಿ ಕೊಟ್ಟಿದೆ. ಹಿರೇಹೆಗ್ಡಾಳ್ ಗ್ರಾಮಕ್ಕೆ ಶಾಲೆಗೆ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು .ಈ ಸಂದರ್ಭದಲ್ಲಿ ಸಹ ಶಿಕ್ಷಕರು ಕೊಟ್ರಮ್ಮ ಜೆ .ಸ್ವಾಮಿ ಸರ್ ಜಿಎಂ .ಕೊಟ್ರೇಶಪ್ಪ ಕೆಎ. ಪ್ರದೀಪ್ ಕುಮಾರ್ ಎಚ್. ನಾಗರಾಜ್ ಜಿಸಿ. ಎಸ್ ಪರಶುರಾಮ್ . ಸುನಿತಾ ನಾಗರಾಜ ಎಸ್. ಇತರರು ಭಾಗವಹಿಸಿ ಸಂಜನಾ .ಎಂ. ಇವರಿಗೆ ಅಭಿನಂದನೆಗಳು ತಿಳಿಸಿದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button