ಬಿಜೆಪಿಯಿಂದ ಕಾಂಗ್ರೇಸ್ ಸರ್ಕಾರ ವಿರುದ್ಧ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ.
ಕೂಡ್ಲಿಗಿ ಅಕ್ಟೋಬರ್.17

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ತಾಲೂಕಾ ಆಡಳಿತ ಸೌಧದ ಮುಂದೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು ಮಾನ್ಯ ತಹಸೀಲ್ದಾರ್ ನೇತೃತ್ವದಲ್ಲಿದ್ದ ಶೀರಸ್ಥೆದಾರರಾದ ಚoದ್ರಶೇಖರ್ ರವರು ಮನವಿ ಪತ್ರವನ್ನು ಸ್ವೀಕರಿಸಿದರು.ಈ ಮನವಿಯನ್ನು ಸನ್ಮಾನ್ಯ ರಾಜಪಾಲರಿಗೆ ಮನವಿ ಪತ್ರವನ್ನು ಕಳಿಸಿಕೊಡಲಾಗುವುದು ಎಂದು ತಿಳಿಸಿದರು.

ಬೆಂಗಳೂರುನಲ್ಲಿ ಐ ಟಿ ಮತ್ತು ಇ ಡಿ ಯವರು ಮಾಡಿದ ದಾಳಿಯಿಂದ 42 ಕೋಟಿ ನಗದು ಹಣ ಸಿಕ್ಕಿರುವ ಹಿನ್ನೆಲೆಯಲ್ಲಿ ಆ ಹಣ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಗುತ್ತಿಗೆಗದಾರರು ಕೊಟ್ಟಿರುವ ಕಮೀಷನ್ ಹಣ ಎಂಬುವುದಾಗಿ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿ ಹರಡಿದರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಲು ಕುರಿತು ಕೂಡ್ಲಿಗಿ ತಾಲೂಕು ಮಂಡಲವತಿಯಿಂದ ಪ್ರತಿಭಟನೆ ಮಾಡಲಾಗಿತ್ತು,ಈ ಸಂರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ಸೂರ್ಯ ಪಾಪಣ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಹಾಗೆ ಬಿಜೆಪಿ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ವಕೀಲರು ಮಾತನಾಡಿದರು,ಈ ಸಂರ್ಭದಲ್ಲಿ ಬಿಜೆಪಿ ತಾಲೂಕು ಕಾರ್ಯದರ್ಶಿ ಮಂಜುನಾಥ, ಯುವ ಘಟಕದ ಅಧ್ಯಕ್ಷರು ಗುಳಿಗಿ ವೀರೇಶ್, ಸಚ್ಚಿನ್, ಗುರಿಕಾರ ರಾಘವೇಂದ್ರ, ಗುನ್ನಳ್ಳಿ ನಾರಾಯಣಿ, ಭರತ್, ಇನ್ನೂ ಮುಂತಾದ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ