ಶಾಲಾ ವಿದ್ಯಾರ್ಥಿನಿಯರಿಗೆ ಉತ್ತಮ ಕಲಿಕೆಯ ಶಿಕ್ಷಣ ನೀಡಿ. ವಿದ್ಯಾರ್ಥಿಗಳಿಂದ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ – ಡಾ. ಎನ್.ಟಿ.ಎಸ್ ಎಚ್ಚರಿಕೆ.
ಹಿರೇಹೆಗ್ಡಾಳ್ ನವೆಂಬರ್.1

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನೂತನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಬುಧವಾರ ರಂದು ಬೆಳಿಗ್ಗೆ 12.30 ಗಂಟೆಗೆ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಶಾಸಕರು ಆಗಮಿಸಿದ್ದು.ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಪ್ರವೇಶ ಮಾಡಿದ್ದು ನಂತರ ಕನ್ನಡ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿದ್ಯಾರ್ಥಿಗಳ ನೂತನ ಕೊಠಡಿಗಳನ್ನು ಕಟ್ಟಡಗಳ ಕೋಣೆಗಳನ್ನ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಮತ್ತು ಅಡಿಗೆ ಸಿಬ್ಬಂದಿ ವರ್ಗದವರನ್ನು ಹಾಗೂ ಗೇಟ್ ವಾಚ್ ಮ್ಯಾನ್ ಮತ್ತು ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗದವರನ್ನು ಕರೆಯಿಸಿ ಮಾನ್ಯ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.

ಈ ವಸತಿ ಶಾಲೆಯಲ್ಲಿ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿ ಬಾಲಕಿಯರು ಇರುವುದರಿಂದ ರಾಜ್ಯ ಮತ್ತು ದೇಶದಲ್ಲಿ ನಾನಾ ರೀತಿಯ ದುರ್ಘಟನೆಗಳು ಕೆಲವು ಕಡೆಗಳಲ್ಲಿ ನಡೆದಿರುವಂತಹ ಘಟನೆಗಳು ಕಂಡುಬಂದಿದ್ದು ಅಂತ ಘಟನೆಗಳ ಬಗ್ಗೆ ನಮ್ಮ ಗಮನಕ್ಕೆ ಏನಾದರೂ ದೂರು ಬಂದರೆ ಹಂತ ವ್ಯಕ್ತಿಗಳು ಯಾರೇ ಆಗಿದ್ದರೂ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಾಗೆ ಸಿಬ್ಬಂದಿ ವರ್ಗದವರು ಒಳ್ಳೆಯ ಮನಸ್ಸಿನ ಶಿಕ್ಷಕರಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಎಲ್ಲಾ ಮಕ್ಕಳು ತಮ್ಮಗಳಿಂದ ಪಡೆದು ಕೊಳ್ಳುವಂತಾಗಬೇಕುಹಾಗೂ ವಿದ್ಯಾರ್ಥಿಗಳ ಬಾಳಿಗೆ ನಿಮ್ಮ ಕಲಿಕೆಯ ಶಿಕ್ಷಣವು ಬೆಳಕಾಗಬೇಕು ಎಂದು ತಿಳಿಸಿದರು. ಹಾಗೂ ಅಡಿಗೆ ಸಿಬ್ಬಂದಿಗಳಿಗೆ ಶಾಸಕರು ಹಾಸ್ಟೇಲ್ ನಲ್ಲಿ ಸರ್ಕಾರ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ತಿಗಾಗಿ ಹಾಸ್ಟೆಲ್ಗಳಲ್ಲಿ ನೂರಾರು ಕೋಟಿಗಳಷ್ಟು ವಿದ್ಯಾರ್ಥಿಗಳಿಗೋಸ್ಕರ ಸರ್ಕಾರಗಳು ಹಣವನ್ನು ಖರ್ಚು ಮಾಡುತ್ತಾ ಬರುತ್ತಿವೆ, ಎಲ್ಲಾ ಅಡಿಗೆ ಸಿಬ್ಬಂದಿಯವರು ಮಕ್ಕಳಿಗೆ ಚೆನ್ನಾಗಿ ರುಚಿಕರವಾಗಿ ಅಡುಗೆಯನ್ನು ಸರ್ಕಾರದ ಮೆನು ಚಾಟ್ ಪ್ರಕಾರ ಪ್ರತಿದಿನ ಅಡುಗೆ ಮಾಡಿ ಪ್ರೀತಿಯಿಂದ ಉಣ ಬಡಿಸಬೇಕು, ಹಾಗೂ ಅಡಿಗೆ ಮಾಡುವಾಗ ಪ್ರತೀ ದಿನಾಲು ಸ್ವಚ್ಛವಾಗಿ ಕೈಯನ್ನು ತೊಳೆದು ಕೊಂಡು ಅಡಿಗೆ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ನಾಗರಾಜ್, ಹಾಗೂ ಹಲವಾಗಲು ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಕನ್ನಿಹಳ್ಳಿ ನಾಗರಾಜ್ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಗುರು ಸಿದ್ದನಗೌಡರು, ಕಾಂಗ್ರೆಸ್ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ, ರೈತ ಮುಖಂಡ ದೇವರಮನೆ ಮಹೇಶ್, ಡಿ ನಾಗರಾಜಪ್ಪ ನಿವೃತ್ತ ಶಿಕ್ಷಕರು, ದಾಣಿ ರಾಘವೇಂದ್ರ, ತಳವಾರ್ ಪ್ರದೀಪ್, ಸಿ ರಾಘವೇಂದ್ರ, ಕಂದಗಲ್ ಪರಶುರಾಮ್, ಕಾಟೇರ್ ಲಂಕೇಶ್ ಇನ್ನು ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ