ಬೇವಿನಮಟ್ಟಿಯಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ.
ಬೇವಿನಮಟ್ಟಿ ನವೆಂಬರ್.2

ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ಸಮಾಜಿಕ ಪರಿಶೋಧನಾ ಗ್ರಾಮ ಸಭೆ ಜರುಗಿತು.ಈ ಸಭೆಯಲ್ಲಿ 2023-24ನೇ ಸಾಲಿನ ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಅನುದಾನ ಬಳಕೆಯಾದ ಬಗ್ಗೆ ಕಾರ್ಯಕ್ರಮ ವ್ಯವಸ್ಥಾಪಕ ಯು ಆರ್ ಗೋನಾಳ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಮುಂದೆ ತಿಳಿಸಿದರು.ಜೊತೆಗೆ ಕೂಲಿ ಕಾರ್ಮಿಕರ ಹಕ್ಕು ಮತ್ತು ಕರ್ತವ್ಯಗಳ ಸವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಬಿ. ಎಚ್. ತಿಳಗೂಳ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಭಿವೃದ್ಧಿ ಅಧಿಕಾರಿ ಪಡಿಯಪ್ಪ ಕೊಳಮಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ನಿಲ್ಲಮ್ಮನವರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪರಸಪ್ಪ ಕೆ. ಭೀಮಣ್ಣವರ, ಎಸ್ ಡಿಎ ಪ್ರೇಮಾ ಲೆಕ್ಕದ, ಬಿಎಫ್ ಟಿ ಸಂತೋಷ ಅಕ್ಕಿ, ಬಿಲ್ ಕಲೆಕ್ಟರ್ ರಾಜು ಬೇವೂರ, ಸರ್ವ ಸದಸ್ಯರು, ಅನುಷ್ಠಾನ ಇಲಾಖೆ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು ಉಪಸ್ಥಿತರಿದ್ದರು.