ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಕಾಮಗಾರಿಗೆ ಕೊನೆಯ ಎಚ್ಚರಿಕೆ.
ಕಲಕೇರಿ ಮಾರ್ಚ್.19

“ನಿಮ್ಮ ಮನೆಯಲ್ಲಿ ಮಹಿಳೆಯರು ಇದ್ದರೆ ಚಕಾರವೆತ್ತದೆ ಶೌಚಾಲಯದ ಕಾಮಗಾರಿ ಕೈಗೆತ್ತಿಕೊಳ್ಳಿ…..
ಇಲ್ಲವಾದರೆ ಮುಂದೈತಿ ಮಾರಿ ಹಬ್ಬ”?
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿರುವ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಂದಾಗಿ ನಾಲ್ಕು ತಿಂಗಳು ಗತಿಸಿ ಹೋಯಿತು ಮಹಿಳೆಯರು ರೊಚ್ಚಿಗೆದ್ದಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಹಿಳೆಯರ ಶೌಚಾಲಯ ಪ್ರಾರಂಭ ಮಾಡಬೇಕೆಂದು ಮಹಿಳೆಯರಿಂದ ಆಗ್ರಹಸುತ್ತು ನಲವತ್ತು ಹಳ್ಳಿಯ ಮಹಿಳೆಯರು ಕಲಕೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದ ಕಾರಣಕ್ಕೆ ಮಹಿಳೆಯರು ರೊಚ್ಚಿಗೆದ್ದು ಬಸ್ ನಿಲ್ದಾಣ ಬಂದ್ ಮಾಡುತ್ತೇವೆ ಎಂದು ತಿಳಿಸಿದರು.

ಕಲಕೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯ ಇದು ಇಲ್ಲದಂತೆ ಆಗಿದೆ ಸಂಬಂಧಪಟ್ಟ ಅಧಿಕಾರಿಗಳು ಮಹಿಳೆಯರ ಶೌಚಾಲಯ ಬೇಗ ಪ್ರಾರಂಭ ಮಾಡದಿದ್ದರೆ ತಾವೇ ಹೋರಾಟಕ್ಕೆ ಹಾದಿ ಮಾಡಿದಂತೆ ಆಗುತ್ತದೆ ಬಲು ಎಚ್ಚರಿಕೆ ಈಗಾಗಲೇ ಹಲವು ಬಾರಿ ಗಮನಕ್ಕೆ ತಂದರು ತುಂಬಾ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತೆ, ಸಹನೆ ಮಿತಿ ಮೀರಿದರೆ ಏನಾಗುತ್ತೆ ಅನ್ನುವಂತದ್ದು ಆದಷ್ಟು ಬೇಗ ಮುಟ್ಟಿ ನೋಡಿಕೊಳ್ಳುವ ಕಾಲ ಬಹಳ ಸನ್ನಿಹಿತವಾಗಿದೆ, ಆಕ್ರೋಶಗೊಂಡ ಮಹಿಳೆಯರಿಂದ ಇದು ಕೊನೆಯ ಎಚ್ಚರಿಕೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ