ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ (ರಿ) ದ ಕೊಟ್ಟೂರು ತಾಲೂಕ ಅಧ್ಯಕ್ಷರಾಗಿ ಮಹಾಂತೇಶ್ ಹೆ ರವರು ಆಯ್ಕೆಯಾಗಿದ್ದಾರೆ.
ಕೊಟ್ಟೂರು ಜೂನ್.18

ಕೊಟ್ಟೂರಿನ ಸರ್ಕಾರಿ ಪ್ರೌಢಶಾಲೆ ( ಬಾಲಕರ ) ಇಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳನ್ನು ರಾಜ್ಯದ ಉಪಾಧ್ಯಕ್ಷರಾದಶ್ರೀ ಆನಂದ್ ನಾಯಕ್ ಇವರ ನೇತೃತ್ವದಲ್ಲಿ ನಡೆಯಿತು. ಕಲ್ಯಾಣ ಕರ್ನಾಟಕದ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಕೋನದಿಂದ ಪ್ರೌಢಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ತೋಟಗಾರಿಕಾ ಶಿಕ್ಷಕರು ಇವರನ್ನೊಳಗೊಂಡ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ರಾಜ್ಯ ಸಂಘದ ಪದಾಧಿಕಾರಿಗಳು ಈ ಕೆಳಗಿನ ಸದಸ್ಯರನ್ನು ಕೊಟ್ಟೂರು ತಾಲೂಕು ಪದಾಧಿಕಾರಿಗಳನ್ನಾಗಿ ಅನುಮೋದನೆ ನೀಡಿದರು. ತಾಲೂಕು ಗೌರವ ಅಧ್ಯಕ್ಷರು* : ಶ್ರೀ ಜಿ.ಪಕ್ಕೀರಪ್ಪ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ನಿಂಬಳಗೆರೆ ತಾಲೂಕು ಅಧ್ಯಕ್ಷರು ಶ್ರೀ ಮಹಾಂತೇಶ.ಹೆಚ್ ಕನ್ನಡ ಶಿಕ್ಷಕರು ಸರಕಾರಿ ಪ್ರೌಢಶಾಲೆ (ಬಾಲಕಿಯರ) ಕೊಟ್ಟೂರು ತಾಲೂಕು ಪ್ರಧಾನ ಕಾರ್ಯದರ್ಶಿಗಳುಶ್ರೀ ಸೋಮಶೇಖರ್ SVSB ಪ್ರೌಢಶಾಲೆ ನಾಗರಕಟ್ಟೆ. ಉಪಾಧ್ಯಕ್ಷರು ಶ್ರೀ ಸಿದ್ದಲಿಂಗಪ್ಪ ದೂಪದಹಳ್ಳಿ ತಾಲೂಕು ಖಜಾಂಚಿಗಳು ಶ್ರೀ ಎನ್.ಎಮ್.ಮನೋಹರ ಟಿಜಿಟಿ ಕಾಳಪುರ ಸಂಘಟನಾ ಕಾರ್ಯದರ್ಶಿ ಶ್ರೀ ಎಸ್ ಸತೀಶ್ ಸರಕಾರಿ ಪ್ರೌಢಶಾಲೆ ಅಲಬೂರು ಸಹ ಕಾರ್ಯದರ್ಶಿ ಶ್ರೀ ಟಿ.ಎಮ್ ಈಶ್ವರಯ್ಯ ವೃತ್ತಿ ಶಿಕ್ಷಕರು ದೂಪದಹಳ್ಳಿ ಈ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅನುಮೋದಿಸಿದರು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ. ಕೊಟ್ಟೂರು