ಹುಚ್ಚುನಾಯಿ ಕಡಿತ 15 ರಿಂದ 20 ಜನರಿಗೆ ಗಾಯ.

ಕೊಟ್ಟೂರು ನವೆಂಬರ್.5

ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು. ಎಲ್ಲಂದರಲ್ಲಿ ವಾಹನ ಸವಾರರ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ ಇವುಗಳ ನಿಯಂತ್ರಣಕ್ಕೆ   ಮುಂದಾಗಬೇಕು ಬೀದಿ ನಾಯಿಗಳ  ಸಂತಾನ ಹೆಚ್ಚುತ್ತಿದ್ದು ವೃದ್ಧರು, ಮಕ್ಕಳ ಮೇಲೆ ಎರಗುವ ಬೀದಿ ಸ್ವಾನಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ  ಸಾರ್ವಜನಿಕರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಟ್ಟಣದಲ್ಲಿ ಹುಚ್ಚುನಾಯಿ ಏಕಾಏಕಿ ದಾಳಿ ಮಾಡಿ ಸುಮಾರು 15 ರಿಂದ 20 ಜನರಿಗೆ ಗಾಯ ಗೊಳಿಸಿದೆ. ಅತೀ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ನಂತರ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳು ಚಿಕಿತ್ಸೆಯನ್ನುಪಡೆಯಲಾಗಿದೆ.ಇದರ ಸ೦ಬ೦ಧ ಪಟ್ಟಣದಲ್ಲಿ ಸಾರ್ವಜನಿಕರು ಭಯ ಭೀತರಾಗಿದ್ದರು. ಈ ವಿಷಯ ತಿಳಿದ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಚಿಕಿತ್ಸೆ ಪಡೆಯುವಂತೆ ಸಲಹೆ ಸೂಚನೆ ನೀಡಿ ಹುಚ್ಚು ನಾಯಿಯನ್ನು ಸೆರೆ ಹಿಡಿದು ಬೇರೆ ಕಡೆ ಸಾಗಿಸುತ್ತೀವೆ .ಎ೦ದು ಪಟ್ಟಣ ಪಂಚಾಯಿತಿಯವರು ತಿಳಿಸಿದ್ದಾರೆ.

ಕೊಟ್ -1ಸಾರ್ವಜನಿಕರು ಹಲವು ಬಾರಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹ ಮಾಡಿದರು ಯಾವುದೇ ಆಗ್ರಹಕ್ಕೆ ಅಧಿಕಾರಿಗಳು ಕ್ಯಾರಿ ಅನ್ನದೆ ಕಣ್ಮುಚ್ಚಿ ಕುಳಿತ್ತೀದ್ದಾರೆ.ಭಾನುವಾರ ರಂದು 15 ರಿಂದ 20 ಜನರಿಗೆ ಹುಚ್ಚು ನಾಯಿ ಕಡಿದಿದ್ದು  ಇದಕ್ಕೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ನೇರಹೊಣೆ ಎಂದು ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ್ ಆರೋಪಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button