ಸಾರ್ವಜನಿಕರಿಲ್ಲದೇ ಕಾಟಾಚಾರಕ್ಕಾಗಿ ಜನ ಸಂಪರ್ಕ ಸಭೆ ನಡೆಸಿದ – ತಹಶೀಲ್ದಾರ್ ನಿಂಗಪ್ಪ ಬಿರಾದಾರ.
ಹುನಗುಂದ ನವೆಂಬರ್.5

ತಾಲೂಕಿನ ಸಾರ್ವಜನಿಕರಿಗೆ ತಿಳಿಸದೇ ಸಮಸ್ಯೆಗಳ ಅವಾಲುಗಳನ್ನು ತಿಳಿಸುವ ಜನರಿಲ್ಲದೇ ಕೇವಲ ಪುರಸಭೆ ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಕೂಡಿಸಿ ಕೊಂಡು ಕಾಟಾಚಾರಕ್ಕಾಗಿ ಶನಿವಾರ ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಜನ ಸಂಪರ್ಕ ಸಭೆಯು ನಡೆಯಿತು.ಹೌದು ಸಾರ್ವಜನಿಕರ ಬಹು ದಿನಗಳಿಂದ ಇತ್ಯರ್ಥ ಪಡಿಸಲಾಗದೇ ಇರುವ ಅನೇಕ ಸಮಸ್ಯೆಗಳ ಅವಾಲುಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ಉದ್ದೇಶದಿಂದ ಸರ್ಕಾರ ಜನ ಸಂಪರ್ಕ ಸಭೆಗಳನ್ನು ಮಾಡುತ್ತೀದೆ ಆದರೇ ಹುನಗುಂದ ತಾಲೂಕಿನಲ್ಲಿ ಮಾತ್ರ ಸರ್ಕಾರದ ಜನತಾ ದರ್ಶನದ ಉದ್ದೇಶಗಳನ್ನು ಗಾಳಿಗೆ ತೂರಿ.ಸಭೆಯ ಕುರಿತು ಮಾಧ್ಯಮ ಪ್ರಕಟಣೆಯನ್ನು ನೀಡದೇ ಸಾರ್ವಜನಿಕರಿಗೆ ಮಾಹಿತಿಯಿಲ್ಲದೇ ತರಾ ತುರಿಯಲ್ಲಿ ಸಭೆಯನ್ನು ನಡೆಸಿ ಕೈ ತೊಳೆದು ಕೊಂಡು ತಮ್ಮ ಕೆಲಸಕ್ಕೆ ತಾವು ಹೊರಟೇ ಹೋದರು ಅಂತಾ ಸ್ಥಳೀಯ ವ್ಯಕ್ತಿಯೊರ್ವ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜನರಿಲ್ಲಾ ಎಂದ ಮಾತ್ರಕ್ಕೆ ತಾಲೂಕಿನಲ್ಲಿ ಸಮಸ್ಯೆಗಳೇ ಇಲ್ಲಾ ಅಂತಲ್ಲಾ.ಸಾಕಷ್ಟು ಸಮಸ್ಯೆಗಳಿವೆ ಆದರೇ ತಾಲೂಕಾಡಳಿತ ಜನ ಸಂಪರ್ಕ ಸಭೆಯ ಸರಿಯಾದ ಮಾಹಿತಿ ಕೊರತೆಯೇ ಜನರಿಲ್ಲದ ಜನತಾ ದರ್ಶನ ನಡೆಸಲು ಪ್ರಮುಖ ಕಾರಣವಾಗಿದೆ.ಎರಡು ಮೂರು ದಿನಗಳ ಮುಂಚೆ ಜನರಿಗೆ ಜನತಾ ದರ್ಶನದ ಮಾಹಿತಿ ನೀಡುವಲ್ಲಿ ತಾಲೂಕಾಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಶನಿವಾರ ಕಾಟಾಚಾರಕ್ಕಾಗಿ ಸಭೆಯನ್ನು ನಡೆಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.ಸಾರ್ವಜನಿಕರಿಗೆ ಮಾಹಿತಿಯಿಲ್ಲದೇ ಸಭೆ ನಡೆಸುತ್ತಿದ್ದೀರಿ ಅಂತಾ ಕೆಲವೊಂದು ಜನರು ತಹಶೀಲ್ದಾರ ಅವರನ್ನು ಪ್ರಶ್ನಿಸಿದರೇ ಅವರು ಹೇಳುವ ವರಸೆನೇ ಬೇರೆ ನಾವೇನು ಮಾಡೋದು ಸಭೆ ನಡೆಸುವಂತೆ ಶನಿವಾರ ೧೧ ಗಂಟೆಗೆ ನಮ್ಮ ಮೇಲಾಧಿಕಾರಿಗಳಿಂದ ಮಾಹಿತಿ ಬಂದಿತ್ತು ಹಾಗೆ ಅದನ್ನು ಪಾಲಿಸುವ ಸಲುವಾಗಿ ೧೧-೩೦ ಗಂಟೆಗೆ ಸಭೆಯನ್ನು ಏರ್ಪಡಿಸಲಾಗಿದೆ.ಇದರಿಂದ ಸಾರ್ವಜನಿಕರಿಗೆ ಮಾಹಿತಿ ಗೊತ್ತಾಗಿಲ್ಲ.ಕೆಲವೊಂದು ಜನರಿಗೆ ಗೊತ್ತಾಗಿ ತಮ್ಮ ಸಮಸ್ಯೆ ಅವಾಲುಗಳನ್ನು ನೀಡಿದ್ದಾರೆ ಎಂದರು.ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಕುಳಿತು ಕೊಳ್ಳುವ ಆಸನದಲ್ಲಿ ಬಹುಪಾಲು ಪುರಸಭೆ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿಗಳೇ ಕುಳಿತಿರೋದು ಕಂಡು ಬಂದಿತ್ತು.ಜನ ಸಂಪರ್ಕ ಸಭೆಯಲ್ಲಿ ಕೇವಲ 13 ಸಮಸ್ಯೆ ಅವಾಲುಗಳು ಬಂದಿದ್ದು.ಅದರಲ್ಲಿ 1 ತೋಟಗಾರಿಕೆ ಇಲಾಖೆ,1 ತಾ.ಪಂ,4 ತಹಶೀಲ್ದಾರ ಕಾರ್ಯಾಲಯಕ್ಕೆ ಸಂಬಂಧಪಟ್ಟರೇ ಉಳಿದ 7 ಸಮಸ್ಯೆಗಳು ಪುರಸಭೆಗೆ ಸಂಬಂಧಿಸಿವೇ ಯಾಕೆಂದರೇ ಸಭೆಯಲ್ಲಿ ಬಹುಸಂಖ್ಯೆಯಲ್ಲಿ ಸೇರಿದವರೇ ಪುರಸಭೆ ಸಿಬ್ಬಂದಿ ಗಳಾಗಿರೋದರಿಂದ ಹೆಚ್ಚಾಗಿ ಅವರ ಅವಾಲುಗಳು ಬಂದಿವೆ ಎನ್ನುತ್ತಾರೆ ಸಾರ್ವಜನಿಕರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ