ಕರ್ನಾಟಕ ನಾಮಕರಣಕ್ಕೆ 50ರ ಸಂಭ್ರಮಾಚರಣೆ – ಕನ್ನಡ ಏಕೀಕರಣದ 50 ಮಹಾ ಪುರುಷರ ಭಾವ ಚಿತ್ರದ ಮೆರವಣಿಗೆ.

ಹುನಗುಂದ ನವೆಂಬರ್.5

ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ (ಜಿಎಸ್‌ಟಿ) ಕಟ್ಟುವ ರಾಜ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುವುದರ ಜೊತೆಗೆ ಮಲತಾಯಿ ಧೋರಣೆಯನ್ನು ತಾಳುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ದ ಕಿಡಿ ಕಾರಿದರು.ಪಟ್ಟಣದ ತಾಲೂಕಾಡಳಿತ,ತಾಲೂಕ ಪಂಚಾಯತ ಮತ್ತು ತಾಲೂಕ ಕ.ಸಾ.ಪ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹ ಯೋಗದಲ್ಲಿ ಟಿಸಿಎಚ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ 5೦ರ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರಕ್ಕೆ ಹೆಚ್ಚಿನ ಜಿಎಸ್‌ಟಿ ಕಟ್ಟಿತ್ತಿರುವ ರಾಜ್ಯಕ್ಕೆ ನಿರಂತರ ಅನ್ಯಾಯ ವಾಗುತ್ತಿದೆ.ಕೇಂದ್ರ ಸರ್ಕಾರ ಇಂತಹ ತಾರತಮ್ಯದ ಧೋರಣೆಯನ್ನು ಕೈ ಬಿಟ್ಟು ದೇಶದ ಪ್ರತಿಯೊಂದು ರಾಜ್ಯಗಳಿಗೆ ಸರಿಯಾದ ಪ್ರಾತಿನಿಧ್ಯ ಸಿಗುವಂತಾಗಬೇಕು.2೦೦ ವರ್ಷಗಳ ಇತಿಹಾಸವಿರುವ ಈ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ.ಇಂತಹ ಇತಿಹಾಸವುಳ್ಳ ಭಾಷೆ ಮತ್ತು ಈ ನಾಡಿನ ಶೌರ್ಯ ಸಾಹಸವನ್ನು ದೇಶದ ಹೊರಗೂ ತೋರಿಸಿದ ಇಮ್ಮಡಿ ಪುಲಿಕೇಶಿಯನ್ನು ಮರೆತು ಇಂದಿನ ಯುವ ಶಕ್ತಿ ಬೇರೆ ಭಾಷೆಯ ಮಹಾ ರಾಜರನ್ನು ತಲೆಯ ಮೇಲಿಟ್ಟುಕೊಂಡು ಮೆರಿಸುತ್ತಿರುವುದು ಕೈ ಬಿಡಬೇಕು.ಕನ್ನಡ ಶಾಲೆಗಳ ಉಳುವಿಗೆ ಸರ್ಕಾರದ ಸೂಚನೆಯಂತೆ ನನ್ನ ಕ್ಷೇತ್ರದಲ್ಲಿ 15೦ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ ಕ್ಲಾಸ್ ಜೊತೆಗೆ ಎಲ್ಲ ಬಗೆಯ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ಕ್ಷೇತ್ರವನ್ನು ಪುನಶ್ಚೇತನ ಗೊಳಿಸಲಾಗುವುದು ಎಂದರು.ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರು ಮಹಾಂತ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತ ಕರ್ನಾಟಕ ಏಕೀಕರಣ ಮತ್ತು ಗಡಿ ರಕ್ಷಣೆಗೆ ಸಾಕಷ್ಟು ಮಹನೀಯರು ಪರಿಶ್ರಮದ ಫಲವೇ ಈ ಕನ್ನಡ 5೦ ರ ಸಂಭ್ರಮವಾಗಿದೆ.ಕನ್ನಡ ನಾಡು ಕಲೆ,ಸಾಹಿತ್ಯ,ಸಂಸ್ಕೃತಿ,ಸಂಪ್ರದಾಯ,ಆಚಾರ,ವಿಚಾರಗಳಲ್ಲಿ ಅತ್ಯಂತ ಶ್ರೀಮಂತಿಕಯನ್ನು ಹೊಂದಿದೆ.ಅದನ್ನು ಮೆಚ್ಚಿ ವಿದೇಶಿಗರು ಗೌರವಿಸುತ್ತಾರೆ.ಆದರೆ ನಾವು ಪರಭಾಷೆಯ ವ್ಯಾಮೋಹಿತರಾಗಿ ನಮ್ಮ ತನವನ್ನು ಕಳೆದು ಹೋದಕೊಳ್ಳಬಾರದು ಎಂದರು.ಉಪನ್ಯಾಸಕ ಸಂಗಮೇಶ ಗಣಿ ಉಪನ್ಯಾಸ ನೀಡಿ ಮಾತನಾಡುತ್ತ ಕರ್ನಾಟಕ ಸಮಗ್ರ ಅಭಿವೃದ್ದಿ ಗೊಂಡಿದ್ದರೂ ಸಹಿತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ.ಕನ್ನಡಿಗರ ಸ್ವಭಾವ ಮೆಚ್ಚುವಂತದ್ದು,ಗಡಿ ಪ್ರದೇಶ ಮತ್ತು ಪ್ರಾಕೃತಿಕ ಸಂಪತ್ತು ಹಾಳಗಿ ಮತ್ತೊಬ್ಬರು ಕೊಳ್ಳೆ ಹೊಡೆಯದಂತೆ ತಪ್ಪಿಸಲು ಕಂಕಣಬದ್ದರಾಗಿ ನಿಲ್ಲಬೇಕಿದೆ ಎಂದರು. ತಹಶೀಲ್ದಾರ ನಿಂಗಪ್ಪ ಬಿರದಾರ ಸ್ವಾಗತಿಸಿದರು.ಕಸಾಪ ತಾಲೂಕ ಅಧ್ಯಕ್ಷ ಮಲ್ಲು ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ರಾಷ್ಟೃಗೀತೆ ಹಾಡಿದರು.ಕನ್ನಡದಲ್ಲಿ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಗರದ ಬಸವ ಮಂಟಪದಿಂದ ಸಾರೋಟದಲ್ಲಿ ಕನ್ನಡಾಂಬೆಯ ಭಾವ ಚಿತ್ರದ ಮೆರವಣಿಗೆ ಮತ್ತು ಕನ್ನಡ ಏಕೀಕರಣಕ್ಕೆ ಮತ್ತು ಭಾಷೆ ನೆಲ,ಜಲ ಗಡಿ ಮತ್ತು ಸಂಸ್ಕೃತಿ ಬೆಳಗಲು ಶ್ರಮಿಸಿದ ಮಹನೀಯರ 5೦ ಭಾವ ಚಿತ್ರಗಳ ಅಟೋಗಳಲ್ಲಿ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಲಾಯಿತು.ದೇವು ಡಂಬಳ,ರವಿ ಹುಚನೂರ,ಶಿವಾನಂದ ಕಂಠಿ,ಶಿವಶಂಕ್ರಪ್ಪ ಕಾಶಪ್ಪನವರ,ವಿಜಯ ಗದ್ದನಕೇರಿ,ಯಮನಪ್ಪ ಬೆಣ್ಣಿ, ಮಹಾಂತೇಶ ಅವಾರಿ,ಸಂಗಣ್ಣ ಗಂಜಿಹಾಳ,ಸಿದ್ದಪ್ಪ ಹೊಸೂರ,ಮಹಾಂತಪ್ಪ ಪಲ್ಲೇದ,ಬಸವರಾಜ ಗದ್ದಿ,ಸಂಗಪ್ಪ ಹೂಲಗೇರಿ,ಜೈನಸಾಬ ಹಗೇದಾಳ,ಮುತ್ತಣ್ಣ ಕಲಗೋಡಿ,ಅಮರೇಶ ನಾಗೂರ,ಜಬ್ಬಾರ ಕಲಬುರ್ಗಿ,ಸಂಗಣ್ಣ ಹಂಡಿ,ಸಿದ್ದು ಶೀಲವಂತರ ಮತ್ತು ಸಂಗಮೇಶ ಹೊದ್ಲೂರ ಮತ್ತು ಇತರರು ವೇದಿಕೆಯಲ್ಲಿದ್ದರು.ಲಿಂಗರಾಜ ಗದ್ದನಕೇರಿ ನಿರೂಪಿಸಿದರು. ಶಿಕ್ಷಕಿ ಗೀತಾ ತಾರಿವಾಳ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button