ಐಹೊಳೆ ಕಾರ್ಮಿಕರ ಆಯವ್ಯಯ ತಯಾರಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಹುನಗುಂದ ನವೆಂಬರ್.8
2024-25ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧ್ಯಕ್ಷ ಹನುಮಂತ ಆಡಿನ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಮೊತ್ತ 5 ಲಕ್ಷಕ್ಕೆ ಹೆಚ್ಚಳವಾದ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ನರೇಗಾದಲ್ಲಿ ಸಿಗುತ್ತಿರುವ ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತ ಆಡಿನ, 2024 – 25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು,

ಗ್ರಾಮಸ್ಥರು ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷನ್ನಾಗಿ ಆಯ್ಕೆ ಮಾಡಿದ್ದು ನೀವೇ ನಿಮ್ಮ ಯಾವುದೇ ಸಮಸ್ಯೆಗಳು ಆದರೆ ಒಂದು ಕರೆ ಮಾಡಿದರೇ ಸಾಕು ನಿಮ್ಮ ಸಮಸ್ಯೆಗೆ ಪರಿಹರಿಸಲ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಬಳಿಕ ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಮಾಲಗಿತ್ತಿ, ನರೇಗಾ ಕೂಲಿ ಕಾರ್ಮಿಕರಿಗಾಗಿಯೇ ವೈಯಕ್ತಿಕ ಕಾಮಗಾರಿಗಳ ಮೊತ್ತ ಹೆಚ್ಚಳ ಮಾಡಿದ್ದಾರೆ. ನಿಮ್ಮಗೆ ಬೇಕಾದ ವೈಯಕ್ತಿಕ ಕಾಮಗಾರಿಗಳ ಅರ್ಜಿ ಸಲ್ಲಿಸಿದ್ದರೇ ಅಂತಹ ಪಟ್ಟಿಗಳನ್ನು ಮಾಡಿ ಕ್ರಿಯಾಯೋಜನೆ ತಯಾರಿಸುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಎಲ್ ಹುಣಶ್ಯಾಳ, ಕೆಎಚ್ ಪಿಟಿ ಸಂಯೋಜಕ ನಾಗರಾಜ್ ವಡ್ಡರಕಲ್ಲ, ಗ್ರಾಮ ಪಂಚಾಯಿತಿ ಅಕೌಂಟೆಂಟ್ ಕೋರಿ, ಸದಸ್ಯರಾದ ಶರಣಪ್ಪ ಮಾಲಗಿತ್ತಿ, ಅನ್ನಪೂರ್ಣ ಮಾದರ, ವೈದ್ಯಾಧಿಕಾರಿ ಮಮತಾಕುಮಾರಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.