ಪದವಿ ವಿದ್ಯಾರ್ಥಿಗಳ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ನ ದಾಖಲಾತಿ ಶುಲ್ಕ ಹೆಚ್ಚಳ.

ಹೊಸಪೇಟೆ ನವೆಂಬರ್.9

ಭಾರತ ವಿದ್ಯಾರ್ಥಿ ಫೆಡರೇಷನ್ ( SFI ) ಹೊಸಪೇಟೆ ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ,ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ವಿರಳ ಇದೆ ಸಂಖ್ಯೆ ವಿರಳ ಆಗಿದ್ದಕ್ಕೆ ಕಾರಣ ಏನೆಂದರೆ ಈ ಭಾಗದ ಜನರ ಆರ್ಥಿಕವಾಗಿ ತುಂಬಾ ಬಡವರು ಹಾಗೂ ಕಡು ಬಡವರು ಇರುತ್ತಾರೆ ಬಡತನ ದಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸ್ ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರು ಅಂತಹ ನಗರಕ್ಕೆ ದುಡಿಯಲು ಹೋದ ಉದಾಹರಣೆ ಸಾಕಷ್ಟು ಇವೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬರಗಾಲದ ಸಮಯದಲ್ಲಿ ಮನೆಯಲ್ಲಿ ಹಣ ಕೊಡದಿದ್ದರೂ ಓದುಬೇಕೆಂಬ ಹಂಬಲದಿಂದಾಗಿ ವಿದ್ಯಾರ್ಥಿಗಳಾದ ನಾವುಗಳುಪದವಿ ದಾಖಲಾತಿ ಮಾಡಿಸಿದ್ದವೆ. ಆದರೆ ಕಳೆದ ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 940 ರೂಪಾಯಿ ಮತ್ತು 2000 ಸಾವಿರ ರೂಪಾಯಿ ಮಾತ್ರ ಇದ್ದ ದಾಖಲಾತಿ ಶುಲ್ಕ ಒಂದೇ ವರ್ಷದಲ್ಲಿ ಧಿಡೀರನೆ 3720 ಹಾಗೂ 4660 ರೂಪಾಯಿ ಆಗಲು ಹೇಗೆ ಸಾಧ್ಯ? ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಅದೇ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ನ OBC ವಿದ್ಯಾರ್ಥಿಗಳಿಗೆ 2660 ರೂಪಾಯಿ ಹೆಚ್ಚಳ ಮಾಡಿದ್ದೀರಿ SC/ST ವಿದ್ಯಾರ್ಥಿಗಳಿಗೆ 940 ರೂಪಾಯಿ ಇದ್ದಿದ್ದು ಈ ವರ್ಷ 3720 ರೂಪಾಯಿ ಮಾಡಿದ್ದೀರಿ ಅಂದರೆ 2720 ರೂಪಾಯಿ ಹಣ ಹೆಚ್ಚಳ ಮಾಡಿರವುದನ್ನು ನಾವು ವಿರೋಧ ಮಾಡುತ್ತೇವೆ ಮತ್ತು ಕಳೆದ ವರ್ಷ ಎಷ್ಟು ಶುಲ್ಕ ಇತ್ತು ಅಷ್ಟು ಮಾತ್ರ ತೆಗೆದು ಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪರವಾಗಿ (SFI) ಮನವಿ ಪತ್ರ ಸಲ್ಲಿಸವುದರ ಮೂಲಕ ಒತ್ತಾಯ ಮಾಡುತ್ತೇವೆ. ಇಲ್ಲದಿದ್ದರೆ ನೂರಾರು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಈ ಮೂಲಕ ಮನವಿ ಪತ್ರವನ್ನು ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿ ಪ್ರಾಂಶುಪಾಲರಾದ ಕೆ. ಶಿವಪ್ಪ, ಅವರ ಮುಖಾಂತರ ವಿಜಯನಗರ ಕುಲ ಸಚಿವರು ( ಆಡಳಿತ ವಿಭಾಗ ) ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಇವರಿಗೆ ಮನವಿ ಪತ್ರವನ್ನು ಕೊಡಲಾಯಿತು.ಈ ಸಂದರ್ಭದಲ್ಲಿ SFI ತಾಲೂಕು ಮುಖಂಡರು ಸದಸ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button