ಆಪಲ್ ತುಂಬಿದ್ದ ಲಾರಿ ಪಲ್ಟಿ – ಮುಗಿಬಿದ್ದ ಜನ.
ಕಾನಾ ಹೊಸಹಳ್ಳಿ ನವೆಂಬರ್.10

ಸಮೀಪದ ಬಣವಿಕಲ್ಲು ರಾಷ್ಟ್ರೀಯ ಹೆದ್ದಾರಿ 50.ರ ಬಳಿ ಗುರುವಾರ ಸಂಜೆ ಸೇಬು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ, ಸೇಬು ಹಣ್ಣುಗಳನ್ನು ಚೀಲದಲ್ಲಿ ತುಂಬಿ ಕೊಳ್ಳಲು ಜನ ಮುಗಿಬಿದ್ದರು. ಜಮ್ಮ ಮತ್ತು ಕಾಶ್ಮೀರದ ಶ್ರೀ ನಗರದಿಂದ ಕೆರಳದ ಕೊಚ್ಚಿಗೆ ಹೊರಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ, ಚಾಲಕ ಸೇರಿ ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಲಾರಿ ಬೀಳುತ್ತಿದ್ದಂತೆ ಸೇಬು ತುಂಬಿ ಕೊಳ್ಳಲು ಜನ ಮುಗಿಬಿದ್ದರು, ಬಣವಿಕಲ್ಲು ಸೇರಿದಂತೆ ಸುತ್ತಲಿನ ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕೆ ಕಾನಾ ಹೊಸಹಳ್ಳಿ ಪೊಲೀಸರು ಧಾವಿಸಿ ಜನರನ್ನು ನಿಯಂತ್ರಿಸಿದರು, ಪೊಲೀಸರು ಬರುವ ಹೊತ್ತಿಗೆ ಸ್ವಲ್ಪ ಸೇಬನ್ನು ಜನ ಸಾಗಿಸಿದ್ದರು. ಕೆಲಕಾಲ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಾನಾ ಹೊಸಹಳ್ಳಿ ಪಿಎಸ್ ಐ ಎರಿಯಪ್ಪ ಸೇರಿದಂತೆ ಸಿಬ್ಬಂದಿಗಳು ಸ್ಥಳದಲ್ಲಿ ಧಾವಿಸಿ ಜನರನ್ನು ನಿಯಂತ್ರಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ