ಕಾಂಗ್ರೆಸ್ ಗೆಲುವಿಗೆ ಗ್ಯಾರಂಟಿ ಕಾರಣ-ಶಹೀದ ರೂಗಿ.
ದೇವರ ಹಿಪ್ಪರಗಿ ನ.23

ಅಭಿವೃದ್ಧಿ ಮತ್ತು ಗ್ಯಾರಂಟಿಗಳು ನಮ್ಮ ಗೆಲುವಿಗೆ ಕಾರಣ ಕಾಂಗ್ರೆಸ್ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಹೀದ ರೂಗಿ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಉತ್ತಮ ಆಡಳಿತ ಅವರು ನೀಡಿದ ಗ್ಯಾರಂಟಿಗಳು, ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ಗ್ಯಾರಂಟಿ ಅಭಿವೃದ್ಧಿಗಳನ್ನು ಮೆಚ್ಚಿ ಜನರು ನಮ್ಮ ಕೈ ಹಿಡಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮೂರೂ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡಿ ಪ್ರಚಾರ ಮಾಡಿದ್ದರು. ಮೂರು ಕ್ಷೇತ್ರದ ಜನತೆ ಇವರ ಮಾತಿಗೆ ಮರುಳಾಗಲಿಲ್ಲ ಈ ಫಲಿತಾಂಶ 2028 ನೇ. ಚುನಾವಣೆಯ ದಿಕ್ಸೂಚಿಯಾಗಿದೆ, ಉತ್ತಮ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ಮೇಲೆ ರಾಜ್ಯದ ಜನ ಭರವಸೆ ಇಟ್ಟು ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ, ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಬ್ಬರೂ ಉಪ ಚುನಾವಣಾ ಕದನದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಚನ್ನಪಟ್ಟಣವು ಎಚ್.ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು , ಶಿಗ್ಗಾಂವಿಯಲ್ಲಿ ಮಗನನ್ನು ಗೆಲ್ಲಿಸಬೇಕಾದ ಹೊಣೆ ಬಸವರಾಜ ಬೊಮ್ಮಾಯಿ ಅವರ ಮೇಲೆ ಇತ್ತು ಆದರೆ ಕ್ಷೇತ್ರದ ಜನತೆ ಅವರಿಬ್ಬರಿಗೂ ಕೈಹಿಡಿಯಲಿಲ್ಲ ಕಾಂಗ್ರೆಸ್ ಪಕ್ಷದ ಉತ್ತಮ ಆಡಳಿತ, ನಮ್ಮ ಕೈ ಹಿಡಿದಿದೆ ಎಂದು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ..ಹಚ್ಯಾಳ.ದೇವರ ಹಿಪ್ಪರಗಿ.