ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾನಾ ಹೊಸಹಳ್ಳಿ ಜನೇವರಿ.5

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಕೂಡ್ಲಿಗಿ ತಾಲೂಕು ವತಿಯಿಂದ ಅಯೋಧ್ಯೆ ತೀರ್ಥ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯನ್ನು ಕಾನ ಹೊಸಹಳ್ಳಿ ಹೋಬಳಿಯ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಿತರಿಸುವ ಕಾರ್ಯ ಕ್ರಮವನ್ನು ಕಾನ ಹೊಸಹಳ್ಳಿ ಸಮೀಪದ ಹುಲಿಕೆರೆ ಹೆದ್ದಾರಿ 50.ರ ಆನಂದ ನರ್ಸರಿಯಲ್ಲಿ ಗುರುವಾರ ನೆರವೇರಿತು. ಈ ವೇಳೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗ ಬೇಕೆಂಬುದು ದೇಶವಾಸಿಗಳ ಬಹುಕಾಲದ ಕನಸಾಗಿದೆ. ಮಂದಿರ ನಿರ್ಮಾಣ ದಿಂದಾಗಿ ದೇಶಕ್ಕೆ ಹೊಸ ಚೈತನ್ಯ ಬಂದಂತಾಗಿದೆ ಎಂದು ಕಾನಮಡುಗು ಶ್ರೀ ಶರಣ ಬಸವೇಶ್ವರ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ನುಡಿದರು. ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂತ್ರಾಕ್ಷತೆಗೆ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಈ ವೇಳೆ ಅನಂತ ಪದ್ಮ ಶೆಟ್ಟಿ ಜೀ ಮಾತನಾಡಿ ಕಳೆದ 500. ವರ್ಷಗಳಿಂದ ನಡೆದ ನಿರಂತರ ಹೋರಾಟದ ಫಲವಾಗಿ ಕಳಂಕ ತೊಡೆದು ಭವ್ಯ ರಾಮ ಮಂದಿರವನ್ನು ಕಾಣುವ ಸುಯೋಗ ನಮ್ಮೆಲ್ಲರದ್ದಾಗಿದೆ. ಆ ಸಂತೋಷದ ಐತಿಹಾಸಿಕ ಕ್ಷಣಗಳನ್ನು ನಾವು ಸಂಭ್ರಮಿಸಲು ಈಗಿನಿಂದಲೇ ಸಿದ್ಧತೆಗಳನ್ನು ನಡೆಯುತ್ತಿದ್ದು, ಪ್ರತಿಯೊಬ್ಬರೂ ಅರದಲ್ಲಿ ಭಾಗವಹಿಸುವ ಮೂಲಕ ಶ್ರೀ ರಾಮನ ಕೃಪೆಗೆ ಪಾತ್ರರಾಗ ಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷರು ಚೆನ್ನಪ್ಪ ವೆಂಕಟೇಶ ಶಿಕ್ಷಕರು, ಚೆನ್ನಪ್ಪ ವಕೀಲರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಕುಲುಮೆಹಟ್ಟಿ ವೆಂಕಟೇಶ್ ಜಿಲ್ಲಾ ಕಾರ್ಯದರ್ಶಿ ಎಸ್ಟಿ ಮೋರ್ಚಾ, ವಿನೋದ್ ಕಾಮಶೆಟ್ಟಿ, ಯೋಗೀಶ್ ಕಾಮ ಶೆಟ್ಟಿ, ಹನುಮಜ್ಜ ನಾಗೇಶ್, ಮರುಳು ಸಿದ್ದಪ್ಪ, ಕೆ ಬಿ ಆನಂದ, ಕೆಎನ್ ಭೀಮಣ್ಣ, ಸಣ್ಣ ಬಾಲಪ್ಪ, ಕೆ ಸುಭಾಷ್ ಚಂದ್ರ, ದಯಾನಂದ ಸಜ್ಜನ್,ಅರವಿಂದ್ ಸಜ್ಜನ್, ಬಸವ ಕುಮಾರ ಹುಲಿಕೆರೆ, ಹನುಮಂತರಾಜು ಶೆಟ್ಟಿ ಪೂಜಾರಹಳ್ಳಿ, ದಲಿತ ಮುಖಂಡರು ದುರುಗೇಶ್, ಪಕೀರಪ್ಪ ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ವಾರ್ಡಿನ ಹಿಂದೂ ಪರ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ