ಬಾಲ್ಯದಲ್ಲಿಯೇ ಓದುವ ಹವ್ಯಾಸವನ್ನು ರೂಢಿಸಿ ಕೊಳ್ಳಿರಿ – ಭಾರಿ ಮಾಂತೇಶ್.

ಕೊಟ್ಟೂರು ನವೆಂಬರ್.15

ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ಬುಧವಾರ ರಂದು ಏರ್ಪಡಿಸಲಾಗಿತ್ತು.ಭಾರತೀಯ ಗ್ರಂಥಾಲಯ ಪಿತಾಮಹರಾದ ಪದ್ಮಶ್ರೀ ಡಾಕ್ಟರ್ ಎಸ್ ಆರ್ ರಂಗನಾಥನ್ ಮತ್ತು ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು.ಭಾರಿ ಮಾಂತೇಶ್ ನಿವೃತ್ತ ಶಿಕ್ಷಕರು ( ಜ್ಯೋತಿ ) ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು ಬಾಲ್ಯದಲ್ಲಿಯೇ ಓದು ಹವ್ಯಾಸವನ್ನು ರೂಢಿಸಿ ಕೊಳ್ಳಬೇಕೆಂದು ಉದ್ಘಾಟಿತರು ಮಾತನಾಡಿದರು.ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸ ಬೇಕು ಜೊತೆಗೆ ನಿರಂತರ ಓದುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಟಿ ಅನ್ನಪೂರ್ಣ ಅಂಗನವಾಡಿ ಮೇಲ್ವಿಚಾರಕ್ಕೆ ( ಸೂಪ್ರ ವೈಸರ್) ಶಿಶು ಅಭಿವೃದ್ಧಿ ಇಲಾಖೆ ಕೂಡ್ಲಿಗಿ ಇವರು ಮಾತನಾಡಿದರು.

ಟಿವಿ ಮೊಬೈಲ್ ನೋಡುವುದನ್ನು ಬಿಟ್ಟು ಪುಸ್ತಕ ಪತ್ರಿಕೆಗಳನ್ನು  ಓದುವುದನ್ನು ಹವ್ಯಾಸ ಮಾಡಿ ಕೊಳ್ಳಬೇಕು ಎಂದು ನಿಂಗಪ್ಪ ಶಿಕ್ಷಣ ಸಂಯೋಜಕರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೂಡ್ಲಿಗಿ ಇವರು ಮಾತನಾಡಿದರು.ಪುಸ್ತಕ ಪ್ರದರ್ಶನ ಏರ್ಪಡಿಸುವ ಉದ್ದೇಶ ರಾಷ್ಟ್ರೀಯ ಗ್ರಂಥಾಲಯ ಆಚರಿಸುವ ಉದ್ದೇಶವನ್ನು ಹೇಳಿದರು ಎಲ್ಲರೂ ಸದಸ್ಯತ್ವವನ್ನು ಪಡೆದು ಓದಬೇಕು ಡಿಜಿಟಲ್ ಗ್ರಂಥಾಲಯವನ್ನು ಬಳಕೆ ಮಾಡಿ ಕೊಳ್ಳಬೇಕು ಎಂದು ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು.ಮುರುಗೇಶ್ ಮೇಲ್ವಿಚಾರಕರು, ಬಚೇನಹಳ್ಳಿ ಈಶಪ್ಪ, ಉಪಸ್ಥಿತರಿದ್ದರು.ನಾರಾಯಣ ಹೆಬ್ಬಾರೆ ಮುಖ್ಯ ಗುರುಗಳು ನಿರೂಪಿಸಿದರು ಶ್ರೀನಿವಾಸ್ ಪತ್ತಾರ್ ಸ್ವಾಗತಿಸಿದರು ಎಚ್ ಮಮತಾ ವಂದಿಸಿದರು .ಚಿಟ್ಟೆ ಶಾಲಾ ಮಕ್ಕಳು ಪ್ರಾರ್ಥಿಸಿದರು.ಬನಶಂಕರಿ ಸಮುದಾಯ ಭವನದಲ್ಲಿ ಶಾಲಾ ಮಕ್ಕಳಿಗೆ ಫ್ಯಾಶನ್ ಶೋ, ಚಿತ್ರಕಲೆ, ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button