ಅಮಲಾಪುರ ಶ್ರೀ ಬಸವೇಶ್ವರ ಕಳಸಾ ರೋಹಣ. ಅಡ್ಡಪಲ್ಲಕ್ಕಿ ಮಹೋತ್ಸವ.
ಅಮಲಾಪುರ ನವೆಂಬರ್.16

ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಲಾಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ನೂತನ ದೇವಸ್ಥಾನದ ಕಳಸಾ ರೋಹಣ ಮತ್ತು ಉಜ್ಜಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗಂಗಾ ಗಣಪತಿ ನವಗ್ರಹ ಪೂಜೆ, ರುದ್ರ ಹೋಮ-ಹವನದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸುಮಂಗಲೆಯರಿಂದ ಆರತಿ ಮತ್ತು ಕುಂಭಮೇಳ ಮತ್ತು ಶಹನಾಯಿ, ಡೊಳ್ಳು ಕುಣಿತ, ಸಕಲ ವಾದ್ಯ ವೈಭವದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಕಳಸಾ ರೋಹಣ ಮೆರವಣಿಗೆ ನಡೆಯಿತು. ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚರ ಮಹಾ ಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಪ್ರತಿಯೊಂದು ಬೀದಿ ಬೀದಿಗಳಲ್ಲೂ ಸಂಚರಿಸಿದ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಶಿರಷ್ಠಾಂಗ ಪ್ರಣಾಮ ಗಳನ್ನುರಿಸುತ್ತಾ ಶ್ರೀಗಳ ಆಶೀರ್ವಾದ ಪಡೆದು ಕೊಂಡರು. ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳು ಗಮನ ಸೆಳೆದವು. ಈ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಸ್ಥಾನದ ಕಮಟಿಯವರು, ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಆಶೀರ್ವಾದ ಪಡೆದು ಕೊಂಡರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ