ಪೌರ ಕಾರ್ಮಿಕರು ಉತ್ತಮ ಕೆಲಸ ಮಾಡಿರಿ ನಿಮ್ಮ ಪರ ನಾವಿದ್ದೇವೆ – ಪರಮೇಶ್.
ತರೀಕೆರೆ ನವೆಂಬರ್.16

ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಜೊತೆ ಜನ ಪ್ರತಿ ನಿಧಿಗಳಾದ ನಾವು ಇದ್ದೇವೆ ಅಧಿಕಾರಿಗಳ ಪರ ನಾವಿಲ್ಲ ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಹೇಳಿದರು. ಅವರು ಇಂದು ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರ ಕಾರ್ಮಿಕರೆಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿರಿ ನಿಮ್ಮ ಪರವಾಗಿ ನಾವಿದ್ದೇವೆ,ಕೆಲಸದಲ್ಲಿ ತಾರತಮ್ಯ ಬೇಡ ಎಂದು ಹೇಳಿದರು. ವಿಶೇಷ ಆಹ್ವಾನಿತರಾದ ಜಿಲ್ಲಾ ಸಪಾಯಿ ಕರ್ಮಚಾರಿ ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಏನ್ ವೆಂಕಟೇಶ್ ಮಾತನಾಡಿ, ಮನೆ ನಿವೇಶನ ರಹಿತ ಪೌರ ಕಾರ್ಮಿಕರಿಗೆ ಮನೆ ನಿವೇಶನಗಳನ್ನು ಕೊಡಿಸಿ ಕೊಡಬೇಕು, ಅನಾರೋಗ್ಯದಿಂದ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಪುರಸಭೆ ಶೇಕಡ 24.10, ಅನುದಾನದಲ್ಲಿ ತುರ್ತು ಆರ್ಥಿಕ ವ್ಯವಸ್ಥೆ ಮಾಡಬೇಕು. ಪೌರ ಕಾರ್ಮಿಕ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಕನಿಷ್ಠ 1 ಲಕ್ಷ ರೂ ಧನ ಸಹಾಯ ಮಾಡಬೇಕು, ಪುರ ಸಭಾ ವಸತಿ ಗೃಹಗಳು ಮತ್ತು ಶೌಚಾಲಯಗಳು ಶಿಥಿಲಾ ಅವಸ್ಥೆಯಲ್ಲಿದ್ದು ದುರಸ್ತಿ ಮಾಡಿಸಬೇಕು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಇನ್ನೋರ್ವ ಸದಸ್ಯರಾದ ಅರುಂಧತಿ ಜಿ ಹೆಗ್ಡೆ ಮಾತನಾಡಿ ಸಪಾಯಿ ಕರ್ಮಚಾರಿ ಗುರುತಿನ ಚೀಟಿ ಇರುವವರು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಪಡೆದು ಕೊಳ್ಳಿರಿ ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಪೌರ ಕಾರ್ಮಿಕರಿಗೆ ಕೆಲಸದ ಬಗ್ಗೆ ಯಾವುದೇ ರೀತಿ ತಾರತಮ್ಯ ತೋರದೆ ರೊಟೇಷನ್ ಪದ್ಧತಿಯಲ್ಲಿ ಕೆಲಸ ಮಾಡಿಸ ಬೇಕು ಎಂದು ಹೇಳಿದರು. ಪುರ ಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ಮಾತನಾಡಿ ನಮ್ಮ ಪುರ ಸಭೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಹೆಸರುವಾಸಿ ಮಾಡಿದೆ. ಇನ್ನು ಉತ್ತಮ ಸ್ಥಿತಿ ಬರಬೇಕು. ಪುರ ಸಭೆಯಲ್ಲಿ ಎಲ್ಲರೂ ಟೀಮ್ ವರ್ಕ್ ಮಾಡುವುದರಿಂದ ಅಭಿವೃದ್ಧಿ ಸಾಧ್ಯ, ಅಧಿಕಾರ ಒತ್ತಡಗಳು ಶಾಶ್ವತವಲ್ಲ, ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಿ. ಯಾರು ವೈಯಕ್ತಿಕ ವಿಚಾರಗಳಿಗೆ ಗಲಾಟೆ ಮಾಡಿ ಕೊಳ್ಳಬಾರದು. ಕುಂದು ಕೊರತೆಗಳಿದ್ದರೆ ಜನ ಪ್ರತಿನಿಧಿಗಳು ಅಧಿಕಾರಿಗಳ ಸಮಕ್ಷಮದಲ್ಲಿ ಬಗೆ ಹರಿಸಿಕೊಳ್ಳಿರಿ. ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಸ್ಪಂದಿಸಿದ್ದೇವೆ, ಇಎಸ್ಐ ಕಾರ್ಡ್ ಜೀವವಿಮೆ ಮಾಡಿಸಿ ಕೊಳ್ಳಬೇಕು. ನೇರ ಪಾವತಿ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ಸಿಗುತ್ತದೆ. ಖಾಯಂ ಪೌರ ಕಾರ್ಮಿಕರು ಮೆಡಿಕಲ್ ರೀ ಎಂಬ್ರಾಯ್ಸ್ ಮೆಂಟ್ ಮಾಡಿ ಕೊಳ್ಳಬಹುದು ಎಂದು ಹೇಳಿದರು. ಈ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆರ್ ಕುಮಾರಪ್ಪ, ಕಚೇರಿ ಅಧೀಕ್ಷಕರಾದ ವಿಜಯ್ ಕುಮಾರ್, ಪರಿಸರ ಅಭಿಯಂತರರಾದ ತಹೇರ ತಸ್ಮೀನ್, ಪ್ರಥಮ ದರ್ಜೆ ಸಹಾಯಕರಾದ ಕಿರಣ್, ಪೌರ ಸೇವಾ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರಾದ ಪ್ರಕಾಶ ಉಪಸಿತರಿದ್ದು, ಪೌರ ಕಾರ್ಮಿಕರರೆಲ್ಲರೂ ತಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ