ನಿನಗಾರು ಸಾಟಿ…..

ಮಮತೆಯಿಂದ ಪ್ರೀತಿಸುವ ತಾಯಿ ನಿನಗಾರು
ಸಾಟಿ
ಕಾಳಜಿಯಿಂದ ನೋಡಿ ಕೊಳ್ಳುವ ತಂದೆ
ನಿನಗಾರು ಸಾಟಿ
ಹೆಗಲಿಗೆ ಹೆಗಲು ನೀಡುವ ಸಹೋದರ
ನಿನಗಾರು ಸಾಟಿ
ಕಷ್ಟಕ್ಕೆ ಸ್ಪಂದಿಸುವ ಸಹೋದರಿ ನಿನಗಾರು
ಸಾಟಿ
ಹಸಿದವರಿಗೆ ಅನ್ನ ನೀಡುವ ರೈತರೆ ನಿಮಗಾರು
ಸಾಟಿ
ನೊಂದವರಿಗೆ ನೆರಳಾಗುವ ಆಶ್ರಯದಾತರೇ
ನಿಮಗಾರು ಸಾಟಿ
ಅಕ್ಷರ ಕಲಿಸುವ ಗುರುಗಳೇ ನಿಮಗಾರು ಸಾಟಿ
ಪ್ರಾಣ ಹೊತ್ತೆ ಇಟ್ಟು ದೇಶ ಸೇವೆ ಮಾಡುವ
ಯೋಧರೆ ನಿಮಗಾರು ಸಾಟಿ
ಇಡೀ ವಿಶ್ವಕೆ ಬೆಳಕು ನೀಡುವ ಸೂರ್ಯನೇ
ನಿನಗಾರು ಸಾಟಿ
ಪ್ರತಿ ಯೊಬ್ಬರ ಬದುಕಿಗೆ ಉಸಿರಾದ ಗಾಳಿಯೇ
ನಿನಗಾರು ಸಾಟಿ
ಜೀವ ಉಳಿಸುವ ಅಮೃತ ಜಲವ
ಸಾಟಿ
ಸಾವಲ್ಲೂ ಜೊತೆ ನಿಲ್ಲುವ ಸ್ನೇಹಿತನೇ
ನಿನಗಾರು ಸಾಟಿ
ಬದುಕಿನಲಿ ಕೈ ಹಿಡಿದು ಬಾಳುವ ಸತಿ
ನಿನಗಾರು ಸಾಟಿ
ಭಾರ ಹೊತ್ತು ಸಲಹು ತಿರುವ ಭೂತಾಯಿ
ನಿನಗಾರು ಸಾಟಿ
ಅಮೃತದ ಹಾಲು ನೀಡುವ ಗೋಮಾತೆ
ನಿನಗಾರು ಸಾಟಿ
ಶ್ರೀ ಮುತ್ತು. ಯ. ವಡ್ಡರ
(ಶಿಕ್ಷಕರು, ಹಿರೇಮಾಗಿ )
ಬಾಗಲಕೋಟ
Mob-9845568484