ಹುಲಿಕೆರೆ ಹಾಲು ಉತ್ಪಾದಕರ ಸಂಘ – ಶಾಂತ ಬಿ. ಅಧ್ಯಕ್ಷೆ. ಉಪಾಧ್ಯಕ್ಷೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಲಿಕೆರೆ ನವೆಂಬರ್.17

ಕೂಡ್ಲಿಗಿ ತಾಲೂಕಿನ ಹುಲಿಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನಅಧ್ಯಕ್ಷರಾಗಿ ಶಾಂತ ಬಿ. ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜ ಘೋಷಿಸಿದರು.ತೆರವಾದ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 12 ಜನ ಮಹಿಳಾ ನಿರ್ದೇಶಕರಿದ್ದು ಅದ್ಯಕ್ಷ ಸ್ಥಾನಕ್ಕೆ ಬೆನಕಶೆಟ್ಟಿ ಶಾಂತ ಸಂದೀಪ ಹಾಗೂ ಉಪಾಧ್ಯಕ್ಷ ರ ಸ್ಥಾನಕ್ಕೆ ಗಂಗಮ್ಮ ಬಸಣ್ಣ ಅವರಷ್ಟೇ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ನಾಗರಾಜ್ ಅವರು ಇಬ್ಬರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಲಜಾಕ್ಷಿ, ನಿರ್ದೇಶಕರುಗಳಾದ,ನಿರ್ಮಲ,ವೀಣಾಕುಮಾರಿ,ಸರಿತಾ, ಮಂಜಮ್ಮ, ಭಾಗ್ಯಮ್ಮ,ಶಾಂತಮ್ಮ, ಸುಮಿತ್ರಮ್ಮ, ಸುನಿತಾ,ಯಲ್ಲಮ್ಮ, ಲಕ್ಷ್ಮೀ, ಹಾಗೂ ಗ್ರಾಪಂ ಅದ್ಯಕ್ಷೆ ಗಂಗಮ್ಮ ಕರಿಬಸಪ್ಪ, ಸದಸ್ಯರಾದ ಗಿರೀಶ್, ದುರುಗೇಶ್, ಸೇರಿದಂತೆ ಗ್ರಾಮದ ಮುಖಂಡರುಗಳಾದ, ರಮೇಶ್ ಗೌಡ, ಜೋಗಳ್ಳಿ ಮಂಜಣ್ಣ, ಕರಿಬಸಪ್ಪ, ನಿಂಗನಳ್ಳಿ ಮಂಜುನಾಥ, ಪೂಜಾರ್ ಕರಿಬಸಪ್ಪ, ಪ್ರಭುದೇವ್, ಬಣಕಾರ್ ಬಸವರಾಜ್, ವೀರೇಶ್ , ಆಂಜನೇಯ, ಹಾಲು ಉತ್ಪಾದಕರ ಮಹಿಳಾ ಸದಸ್ಯರು ಸೇರಿದಂತೆ ಅನೇಕರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ