ಭೀಕರ ಬರಗಾಲದಿಂದ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದ-ಹನಮಂತ ಮಾವಿನಮರದ.
ಹುನಗುಂದ ನವೆಂಬರ್.17

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಿಲ್ಲದೇ ರೈತರ ಬಿತ್ತನೆ ಮಾಡಿದ ಬೆಳೆಯು ಸಂಪೂರ್ಣ ಹಾನಿಯಾಗಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಲಕೋಟ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ನೇತೃತ್ವದಲ್ಲಿ ಹುನಗುಂದ ತಾಲೂಕಿನ ಬೆವಿನಮಟ್ಟಿ ಗ್ರಾಮದ ಜಮೀನಗಳಲ್ಲಿ ಬರ ವೀಕ್ಷಣೆ ಮಾಡಿದರು.ಜಿಲ್ಲೆಯ ಜೆಡಿಎಸ್ ಮುಖಂಡರೊಂದಿಗೆ ಬೇವಿನಮಟ್ಟಿ ಗ್ರಾಮದ ರೈತರಾದ ವೀರಪಾಕ್ಷಪ್ಪ ಹಡಗಲಿ ಮತ್ತು ಯಲ್ಲಪ್ಪ ನಡುವಿನಮನಿ ಅವರ ಜಮೀನನಲ್ಲಿ ಬಿತ್ತನೆಯಾಗಿ ಮಳೆಯಿಲ್ಲದೇ ಹಾಳಗಿರುವ ಗೋವಿನ ಜೋಳ ಮತ್ತು ಮೆಣಸಿನಕಾಯಿ ಬೆಳೆಯನ್ನು ವೀಕ್ಷಣೆ ಮಾಡಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಮುಂಗಾರು ಹಂಗಾಮಿನಲ್ಲಿ ಆಶಾದಾಯಕವಾಗಿ ನಮ್ಮ ರೈತರು ಬಿತ್ತನೆ ಮಾಡಿದರೂ ಫಸಲು ಮೇಲೆ ಬಂದರೂ ೬ ವಾರಗಳಿಂದ ಮಳೆಯಾಗದೇ ಸಂಪೂರ್ಣ ಬೆಳೆ ಹಾನಿಯಾಗಿದ್ದು.ಸರ್ಕಾರ ರಾಜ್ಯದ ೨೩೬ ತಾಲೂಕಿನ ಪೈಕಿ ೨೧೬ ತಾಲೂಕಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿ ೪೫ ದಿನಗಳು ಕಳೆದರೂ ಯಾವದೇ ಬರ ಪರಿಹಾರ ಮತ್ತು ಬರ ಕಾಮಗಾರಿಗಳನ್ನು ಕೈಕೊಳ್ಳದೇ ಇರೋದು ಶೋಚನೀಯ ಸಂಗತಿಯಾಗಿದೆ ಎಂದು ರಾಜ್ಯ ಸರ್ಕಾರವನ್ನು ದೂರಿದರು.ಬಾಗಲಕೋಟಿ ಜಿಲ್ಲೆಯ ೨ ಲಕ್ಷ ೬೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ.೮೯% ರಷ್ಟು ಮುಂಗಾರು ಮತ್ತು ಹಿಂಗಾರು ಬಿತ್ತನೆಯಾಗಿದ್ದು.ಅದರಲ್ಲೂ ಹುನಗುಂದ ಮತ್ತು ಇಳಕಲ್ಲ ತಾಲೂಕಿನಲ್ಲಿ ಶೇ.೬೩ ರಿಂದ ಶೇ೬೪ % ರಷ್ಟು ಬಿತ್ತನೆಯಾಗಿದೆ.ಬರಗಾಲಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ೧ ಲಕ್ಷ ೯೩ ಸಾವಿರ ಹೆಕ್ಟೇರ್ ನಲ್ಲಿ ಬೆಳೆಗಳು ನಾಶವಾಗಿ ಅಂದಾಜು ೨ ಸಾವಿರ ಕೋಟಿ ರೈತರ ಬೆಳಗಳ ಹಾನಿಯಾಗಿದೆ ಜಿಲ್ಲಾಡಳಿತವೇ ಸರ್ಕಾರಕ್ಕೊಂದು ವರದಿ ಸಲ್ಲಿಸಿದೆ.ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪ್ರಕಾರ ಜಿಲ್ಲೆಗೆ ತುರ್ತಾಗಿ ೨೬೪ ಕೋಟಿ ಪರಿಹಾರ ನೀಡಬೇಕೆಂದು ಸರ್ಕಾರ ತಿಳಿಸಿದರೂ ಕೂಡಾ ನ.೫ ರಂದು ರಾಜ್ಯ ಸರ್ಕಾರ ೩೦೦ ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಿದೇ ಅದರಲ್ಲಿ ನಮ್ಮ ಜಿಲ್ಲೆಗೆ ೧೩.೫ ಕೋಟಿ ಹಣ ಬಿಡುಗಡೆಯಾಗಿದ್ದು ಅದರಲ್ಲಿ ಬರ ಪರಿಹಾರ ಮತ್ತು ಬರ ಕಾಮಗಾರಿ ಕೈಕೊಳ್ಳಲು ಸಾಧ್ಯನಾ ? ಮತ್ತು ಕೂಲಿ ಕಾರ್ಮಿಕರ ಸ್ಥಿತಿಗತಿಗಳೇನು ಎಂದು ಸರ್ಕಾರವನ್ನು ಪ್ರಶ್ನಿಸಿದರು.ಒಟ್ಟಾರೆಯಾಗಿ ರಾಜ್ಯ ಸರ್ಕಾರ ತಕ್ಷಣವೇ ಭೀಕರ ಬರಗಾಲ ಮತ್ತು ತೀವ್ರ ಸಂಕಷ್ಟದಲ್ಲಿರುವ ರೈತರ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರವನ್ನು ನೀಡಬೇಕು. ನೀಡದಿದ್ದರೇ ಬರ ನೈಜ ವರದಿಯನ್ನು ಪಡೆದು ಕೊಂಡು ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡಿಸಿ ಜಿಲ್ಲಾಧಿಕಾರಿಗಳ ಮೂಲಕ ಬರ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.ಜೆಡಿಎಸ್ ಬೆಳಗಾವಿ ವಿಭಾಗದ ಯುವ ಘಟಕದ ಅಧ್ಯಕ್ಷ ಶಿವಪ್ರಸಾದ ಗದ್ದಿ,ಶ್ರೀನಿವಾಸ ಗೌಡರ,ಚಂದ್ರಶೇಖರ ಶಾಖಾ,ಶ್ರೀಶೈಲ ಕರಿಶಂಕರಿ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ರೈತರು ಇದ್ದರು.ಬಾಕ್ಸ್ ಸುದ್ದಿ-ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ರೈತರಿಗೆ,ಕೂಲಿ ಕಾರ್ಮಿಕರಿಗೆ,ಜನಸಾಮಾನ್ಯರ ಮುಖಕ್ಕೆ ಮಸಿ ಬಳೆಯುವ ಕೆಲಸ ಮಾಡುತ್ತಿದೆ.ಬರಗಾಲದ ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ,ರಾಜ್ಯದ ಜನರ ಬಗ್ಗೆ ಕಳಕಳಿ ಇದ್ದರೇ ತಕ್ಷಣವೇ ಅವರ ನೆರವಿಗೆ ಬರಲಿ.ಹನಮಂತ ಮಾವಿನಮರದ ಜಿಲ್ಲಾಧ್ಯಕ್ಷರು ಜೆಡಿಎಸ್ ಬಾಗಲಕೋಟಿ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ