ದಣಿವರಿಯದ ರಂಗ ಕಲಾವಿದ ಮಹಲಿಂಗಪ್ಪರಿಗೆ – ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿದೆ.
ಹಾರಕಬಾವಿ ಅಕ್ಟೋಬರ್.23

ಬಳ್ಳಾರಿ ಜಿಲ್ಲೆಯಿಂದ ವಿಭನೆಗೊಂಡ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ. ಹಾರಕಬಾವಿ ಗ್ರಾಮದ ದಲಿತ ಸಮುದಾಯದ ಹಿರಿಯರು ಹಾಗೂ ನಿವೃತ್ತ ಪ್ರಾಧ್ಯಾಪಕರು. ದಣಿವರಿಯದ ಹಿರಿಯ ರಂಗ ಕಲಾವಿದರಾದ ಡಾ”ಮಹಾಲಿಂಗಪ್ಪರವರಿಗೆ” 2023ನೇ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಿದೆ ಎಂದು. ತಾಲೂಕು ಹಾಗೂ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ, ವಂದೆ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಕುಗ್ರಾಮ ಹಾರಕಬಾವಿಯ ಬಡ ದಲಿತ ಸಮುದಾಯದಲ್ಲಿ, ಜನಿಸಿ ವಿದ್ಯಾಭ್ಯಾಸದಲ್ಲಿ ಉನ್ನತ ಪದವಿ ಪಡೆದು. ಕನ್ನಡ ವಿಷಯದಲ್ಲಿ ಹೈಸ್ಕೂಲ್ ಪ್ರಾಧ್ಯಾಪಕರಾಗಿ, ಸುಮಾರು ನಾಲ್ಕೈದು ದಶಕಗಳ ಕಾಲ ಸೇವೆ ಸಲ್ಲಿಸಿ ಸಧ್ಯ ನಿವೃತ್ತಿ ಹೊಂದಿದ್ದಾರೆ. ಡಾ”ಮಹಾಲಿಂಗಪ್ಪನವರು” ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದವರು, ಪ್ರವೃತ್ತಿಯಲ್ಲಿ ರಂಗ ಕಲಾವಿದರಾಗಿದ್ದಾರೆ. ಅವರು ತಮ್ಮ ಹದಿನೈದನೇ ವಯಸ್ಸಿನಿಂದಲೇ ಬಣ್ಣ ಹಚ್ಚಿಕೊಂಡು, ತಮ್ಮ 71ನೇ ವಯಸ್ಸಿನಲ್ಲಿಯೂ ರಂಗ ಭೂಮಿಯಲ್ಲಿ ಸಕ್ರೀಯ ಕ್ರಿಯಾಶೀಲರಾದ್ದಾರೆ ಡಾ”ಮಹಾಲಿಂಗಪ್ಪರವರು” ಇವರು ತಮ್ಮ ಬಾಲ್ಯ ಜೀವನದಿಂದಲೂ, ನಿರಂತರವಾಗಿ ಶಿಕ್ಷಣ ರಂಗ ಸಾಂಸ್ಕೃತಿಕ ಸಾಮಾಜಿಕ ಕ್ಷೇತ್ರಗಳಲ್ಲಿ. ಸುಮಾರು 55ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ಅದಕ್ಕಾಗಿ ಸಾವಿರಾರು ಪ್ರಶಂಸನಾ ಪತ್ರ ಹಾಗೂ ಅಭಿನಂದನಾ ಪತ್ರ ಅವರನ್ನು ಅರಸಿ ಬಂದಿವೆ. ರಾಜ್ಯದ ಪ್ರತಿಷ್ಠಿತ ಮಹಾ ವಿಶ್ವವಿದ್ಯಾಲಯದಿಂದ, ರಂಗ ಕಲಾ ಕ್ಷೇತ್ರದ ಸೇವೆಗೆ. ಪಿಹೆಚ್‌ಡಿ ಪದವಿ ನೀಡಿದೆ. ಡಾ”ಮಹಾಲಿಂಗಪ್ಪರಿಗೆ ಡಾಕ್ಟರೇಟ್ ಪದವಿ ನೀಡಿ, ಗೌರವಿಸಿ ಸನ್ಮಾನಿಸಲಾಗಿದೆ. ತಾಲೂಕಾಡಳಿತದಿಂದ ಹಾಗೂ ಜಿಲ್ಲಾಡಳಿತದಿಂದ ಹತ್ತಾರು, ಪ್ರಶಸ್ತಿ ನೀಡಲಾಗಿದೆ. ಅಂತೆಯೇ ರಾಜ್ಯ ಸರ್ಕಾರ ಅವರಿಗೆ ಪ್ರಸಕ್ತ 2023ನೇ ಸಾಲಿನ,

ರಾಜ್ಯ ಮಟ್ಟದ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಬೇಕಿದೆ. ಅದಕ್ಕಾಗಿ ಅವರು ಕಳೆದ ದಶಕಗಳಿಂದ ಅಗತ್ಯ ದಾಖಲೆಗಳು ಸಮೇತ, ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಅಂತೆಯೇ ಡಾ”ಮಹಾಲಿಂಗಪ್ಪರವರು” ರಾಜ್ಯ ಸರ್ಕಾರಕ್ಕೆ, ಮನವಿ ಮಾಡಿದ್ದಾರೆ. ಜೊತೆಗೆ ತಾಲೂಕಿನ ಹತ್ತಾರು ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಸಮಾಜ ಸೇವಕರು. ಪ್ರಭಾವಿ ರಾಜಕಾರಣಿಗಳು ಮತ್ತು ಪ್ರಭಾವಿ ಜನಪ್ರತಿನಿಧಿಗಳು. ಸಚಿವರು ಹಾಗೂ ಶಾಸಕರು ಸೇರಿದಂತೆ ರಾಜ್ಯದ ಪ್ರಮುಖ ಗಣ್ಯ ಮಾನ್ಯರು, ಐದಾರು ದಶಕಗಳಿಂದಲೂ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ. ಡಾ ಮಹಲಿಂಗಪ್ಪರವರಿಗೆ, ರಂಗ ಕಲಾ ಕ್ಷೇತ್ರದ ಲ್ಲಿ ಗಣನೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ. ರಾಜ್ಯ ಸರ್ಕಾರ 20203ನೇ ಸಾಲಿನ, ರಾಜ್ಯ ಮಟ್ಟದ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಅವರನ್ನು ಗೌರವಿಸಿ ಸನ್ಮಾನಿಸಬೇಕಿದೆ. ಅದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ, ಕೆಲ ಪ್ರಶಸ್ತಿಗಳು ಕೇವಲ ಪ್ರಭಾವಿಗಳ ಹಣವಂತರ ಪಾಲಾಗುತ್ತಿವೆ ಎಂಬ ಆರೋಪವಿದೆ. ಈ ಭಾರಿಯಾದರೂ ರಾಜ್ಯ ಸರ್ಕಾರ, ಡಾ”ಮಹಾಲಿಂಗಪ್ಪರವರಿಗೆ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಬೇಕಿದೆ. ಇದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ, ರಂಗ ಕಲಾವಿದರ ಗಣ್ಯರ. ಸಚಿವರು ಹಾಗೂ ಸಂಸದರಾದ ಶಿವರಾಜ್ ಎಸ್.ತಂಗಡಗಿ ಮತ್ತು ಜಿಲ್ಲಾ ಉಸ್ಥುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್, ಬಳ್ಳಾರಿ ಸಚಿವ ಬಿ.ನಾಗೇಂದ್ರಪ್ಪ. ವೈ.ದೇವೇಂದ್ರಪ್ಪ, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್. ಸೇರಿದಂತೆ. ಜಿಲ್ಲೆಯ ಎಲ್ಲಾ ಹಂತದ ಜನ ಪ್ರತಿನಿಧಿಗಳು, ವಂದೇ ಮಾತರಂ ಜಾಗೃತಿ ವೇದಿಕೆ, ಹಾಗೂ ಡಾ”ಬಿ.ಅರ್.ಅಂಬೇಡ್ಕರ್ ಅಂಬೇಡ್ಕರ್ ಸಂಘ ಸೇರಿದಂತೆ. ವಿವಿಧ ದಲಿತ ಪರ ಹಾಗೂ ಕನ್ನಡ ಪರ ನೂರಾರು ಸಂಘ ಸಂಸ್ಥೆಗಳು. ಅವಳಿ ಜಿಲ್ಲೆಗಳ ಎಲ್ಲಾ ತಾಲೂಕುಗಳ ಹೋರಾಟಗಾರರು. ತಾಲೂಕುಗಳ ಹಾಗೂ ಜಿಲ್ಲೆಯ ಎಲ್ಲಾ ಮಠಾಧೀಶರು, ವಿವಿಧ ಪಕ್ಷಗಳ ಪ್ರಮುಖರು. ಗಣ್ಯ ಮಾನ್ಯರು, ಅವಳಿ ಜಿಲ್ಲೆಗಳ ಸಮಸ್ತ ನಾಗರಿಕರು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಇದು ಗ್ರಾಮಗಳ ಮತ್ತು ಗ್ರಾಮಸ್ಥರ ಹಾಗೂ ಸಮಸ್ತ ಕಲಾವಿದರ ಒಕ್ಕೊರಲಿನ ಹಕ್ಕೊತ್ತಾಯವಾಗಿದ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ