ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿಯ ತಾಲೂಕಾ ಅಧ್ಯಕ್ಷರಾಗಿ ಮಂಜು ಮಯೂರ ನೇಮಕ.
ಕೂಡ್ಲಿಗಿ ನವೆಂಬರ್.23

ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಶ್ರೀ ವಾಲ್ಮೀಕಿ ಗುರು ಪೀಠದಲ್ಲಿ 2024ರ ಫೆಬ್ರವರಿ ತಿಂಗಳ 8 ಮತ್ತು 9 ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಗೆ ಪಟ್ಟಣದ ವಾಲ್ಮೀಕಿ ಯುವ ಮುಖಂಡ ಮಂಜು ಮಯೂರ ಅವರನ್ನ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ಪ್ರಸನ್ನನಾಂದ ಪುರಿ ಸ್ವಾಮಿಜೀಗಳ ನೇತೃತ್ವದಲ್ಲಿ ಮತ್ತು ವಾಲ್ಮೀಕಿ ಮುಖಂಡರ ಸಮ್ಮುಖದಲ್ಲಿ ಸರ್ವಾನುಮತ ದಿಂದ ಆಯ್ಕೆ ಮಾಡಿದರು. ಈ ಸಂಧರ್ಭದಲ್ಲಿ ವಾಲ್ಮೀಕಿ ಗುರು ಪೀಠದ ಶ್ರಿ ಪ್ರಸನ್ನನಾಂದ ಪುರಿ ಸ್ವಾಮಿಜೀ ಮಾತಾನಾಡಿ, ಫೆಬ್ರವರಿ 8 ಮತ್ತು 9ರಂದು ಮಹರ್ಷಿ ವಾಲ್ಮೀಕಿ ಗುರು ಪೀಠದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲ ಉದ್ದೇಶ ವಾಲ್ಮೀಕಿ ನಾಯಕ ಸಮಾಜವು ಧಾರ್ಮಿಕ ತಳಹದಿಯ ಮೇಲೆ ವಾಲ್ಮೀಕಿ ಜಾತ್ರೆಯ ನೆಪದಲ್ಲಿ ಜನ ಜಾಗೃತಿ ಆಗಬೇಕಿದೆ.ಈ ನಿಟ್ಟಿನಲ್ಲಿ ತಾಲೂಕು ವಾಲ್ಮೀಕಿ ಜಾತ್ರಾ ಸಮಿತಿಯನ್ನು ರಚಿಸಿ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸುವಂತೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕು ಹಾಗೂ ಐತಿಹಾಸಿಕವಾಗಿ ಜಾತ್ರೆ ಎಲ್ಲಾ ರೀತಿಯಲ್ಲಿಯೂ ಯಶಸ್ವಿಯಾಗಬೇಕು.

ಅದಕ್ಕಾಗಿ ಸಮುದಾಯದ ಸಹಭಾಗಿತ್ವ ಅವಶ್ಯ ಎಂದು ತಿಳಿಸಿದರು. ಜಾತ್ರಾ ಸಮಿತಿಯ ನೂತನ ಅಧ್ಯಕ್ಷ ಮಂಜು ಮಯೂರ ಮಾತನಾಡಿ, ತಾಲೂಕಿನ ಕಟ್ಟ ಕಡೆಯ ಪ್ರತಿ ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ವಾಲ್ಮೀಕಿ ಜಾತ್ರೆಗೆ ಬರುವಂತೆ ಪ್ರೇರೇಪಿಸುವ ಜೊತೆ ಉತ್ಸಾಹ ತುಂಬುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಜನರು ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಅದರಂತೆ ನೂತನ ಜಾತ್ರಾ ಸಮಿತಿಗೆ ಸದಸ್ಯರಾಗಿ ವೀರಣ್ಣ, ಸಿರಿಬಿ ಮಂಜುನಾಥ, ರಾಘವೇಂದ್ರ, ಸತೀಶ್, ಅಂಜಿ ಬೈಯ್ಯಾ, ಅಜೇಯ್, ರಮೇಶ್, ಭರತ್, ಮಾಳ್ಗಿ ರಾಘು, ಸೇರಿದಂತೆ ಅನೇಕ ಯುವಕರು ಜಾತ್ರಾ ಸಮಿತಿಯ ಕಾರ್ಯ ಚಟುವಟಿಕೆ ಕುರಿತು ಜವಾಬ್ದಾರಿಯನ್ನು ಸ್ವಯಂ ಪ್ರೇರಿತರಾಗಿ ತೆಗೆದು ಕೊಂಡರು.ಈ ಸಂದರ್ಭದಲ್ಲಿ ವಾಲ್ಮೀಕಿ ತಾಲೂಕು ಮಹಾಸಭಾ ಅಧ್ಯಕ್ಷ ಎಸ್. ಸುರೇಶ್, ಕಾವಲಿ ಶಿವಪ್ಪ ನಾಯಕ, ಬಿ. ವೆಂಕಟೇಶ್, ಜಿಂಕಲ್ ನಾಗಮಣಿ,ಪಿ. ಚಂದ್ರು, ಇನ್ನೂ ಮುಂತಾದ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ