ವಿಶ್ವಗುರು ಶ್ರೀ ಬಸವೇಶ್ವರ ಅಶ್ವರೂಢ ಪುತ್ತಳಿ ಲೋಕಾರ್ಪಣೆ.

ಹೊಸಪೇಟೆ ನವೆಂಬರ್.23

ರಾಜ್ಯದ 31.ನೇ ಜಿಲ್ಲೆಯಾಗಿ ಹೊರ ಹೊಮ್ಮಿರುವ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಹುದಿನದ ಕನಸಾಗಿರುವ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಕಂಚಿನ ಪುತ್ತಳಿಯನ್ನು ಅರಣ್ಯ ಸಚಿವ ಈಶ್ವರ್ ಕಂಡ್ರೆ ಉದ್ಘಾಟಿಸಿದರು.ಹೊಸಪೇಟೆ ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದ ಹತ್ತಿರದಲ್ಲಿರುವ ಬಸವೇಶ್ವರ ಕಂಚಿನ ಪುತ್ತಳಿಯನ್ನು ಅಖಿಲ ಭಾರತೀಯ ವೀರಶೈವ ಮಹಾಸಭಾ ಗೌರವಾಧ್ಯಕ್ಷರು ಮತ್ತು ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಬಸವಣ್ಣನವರು 12ನೇ ಶತಮಾನದಲ್ಲಿ ಬರೆದಂತ ವಚನಗಳು ಈಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಾತಿ ತಾರತಮ್ಯವಿಲ್ಲದೆ ಭಾತೃತ್ವ, ಸ್ವಾತಂತ್ರ,ಸಮಾನತೆಯನ್ನು ಸಾರುವ ಸಂವಿಧಾನವನ್ನು ಬರೆದಿದ್ದಾರೆ. ಅದೇ ರೀತಿಯಾಗಿ ನಮ್ಮ ಭಾರತ ಸಂವಿಧಾನವನ್ನು ನಾವೆಲ್ಲರೂ ಒಪ್ಪಿಕೊಂಡು ಅಪ್ಪಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.ಈ ಬಸವಣ್ಣನವರ ಕಂಚಿನ ಪುತ್ತಳಿ 1960 ಕೆಜಿ ತೂಕವಿದ್ದು 11 ಅಡಿ ಎತ್ತರವಿದ್ದು ವೃತ್ತ ಮತ್ತು ಪ್ರತಿಮೆ ಸೇರಿ ಒಟ್ಟು 21 ಅಡಿ ಎತ್ತರವಾಗಿದೆ. ಸಮಾರಂಭದಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಅಶ್ವರೂಢ ಪುತ್ತಳಿ ಹಾಗೂ, ಹಂಪಿ ಹೇಮಕೋಟ ಶೂನ್ಯ ಸಿಂಹಾಸನಾದೀಶ್ವರ,ಜಗದ್ಗುರು ಪೂಜ್ಯ ಲಿಂಗೈಕ್ಯ ಶ್ರೀ ಮ.ನಿ.ಪ್ರ. ಕೊಟ್ಟೂರು ಸಂಗನಬಸವ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಮನೋಹರವಾಗಿತ್ತು. ಈ ಮೂರ್ತಿಯನ್ನು ಬೆಂಗಳೂರಿನ ಶಿವಕುಮಾರ್ ಎಂಬ ಶಿಲ್ಪಿಯು ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.ಜಗಜ್ಯೋತಿ ಬಸವಣ್ಣನವರ ಪುತ್ತಳಿ ಅನಾವರಣದ ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕೋಲು, ಡೊಳ್ಳು, ತಾಸೆ, ನಂದಿಕೋಲು, ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದು ಕೊಟ್ಟವು. ಈ ಮೆರವಣಿಗೆ ಬಸವಣ್ಣ ವೃತದಿಂದ ಪ್ರಮುಖ ವೃತ್ತಗಳಾದ ಡಾಕ್ಟರ್ ಅಂಬೇಡ್ಕರ್ ಸರ್ಕಲ್, ಅಪ್ಪು ಸರ್ಕಲ್ ಮೂಲಕ ಕೊಟ್ಟೂರು ಸ್ವಾಮಿ ಮಠಕ್ಕೆ ತಲುಪಿತು.ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಹಂಪಿ ಹೇಮಕೋಟ ಶೂನ್ಯ ಸಿಂಹಾಸನಾದೀಶ್ವರ ಜಗದ್ಗುರು ಪೂಜ್ಯ ಶ್ರೀ ಮ.ನಿ.ಪ್ರ. ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಕೊಟ್ಟೂರು ಸ್ವಾಮಿ ಸಂಸ್ಥಾಮಠ ಹೊಸಪೇಟೆ. ಪೂಜ್ಯ ಶ್ರೀ ಮ.ನಿ.ಪ್ರ ಸಿದ್ದಲಿಂಗ ಮಹಾಸ್ವಾಮಿಗಳು ಸುವರ್ಣ ಗಿರಿ ವಿರಕ್ತಮಠ ವಳಬಳ್ಳಾರಿ. ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟನೆಯನ್ನು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಹೆಚ್ ಆರ್ ಗವಿಯಪ್ಪನವರು ವಹಿಸಿದ್ದರು, ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ , ಕೊಪ್ಪಳ ಸಂಸದ ಸಂಗಣ್ಣ ಕರಡಿ . ಮತ್ತು ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು, ಕಾರ್ಯದರ್ಶಿಗಳು ಇತರರಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button