ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ – ವಿಜಯನಗರ ಜಿಲ್ಲೆಯಿಂದ 3. ಜನ ಕ್ರೀಡಾಪಟುಗಳು ಆಯ್ಕೆ.
ಹೊಸಪೇಟೆ ನವೆಂಬರ್.23





ಬೆಂಗಳೂರಿನಲ್ಲಿ ನವಂಬರ್ 22 ರಿಂದ 26 ರವರೆಗೆ ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಗೆ ಜಿಲ್ಲೆಯ ಹೊಸಪೇಟೆ ನಗರ ದವರಾದ 3. ಜನ ಕ್ರೀಡಾಪಟುಗಳಾದ ವಾಲಿಭಾಷ, ಗಂಗಾಧರ್, ಮತ್ತು ವಿಜಯವಾಣಿ ಆಯ್ಕೆಯಾಗಿದ್ದರೆಂದು ಕ್ರೀಡಾ ತರಬೇತುದಾರ ವಾಲಿಭಾಷ ತಿಳಿಸಿದರು.

ಈ ಸ್ಪರ್ಧೆಗೆ ಆಯ್ಕೆಯಾದ 3 ಜನ ಕ್ರೀಡಾಪಟುಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1 ರವರೆಗೆ ಮಂಗಳೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಜ್ ಟ್ರಸ್ಟ್ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯಿಂದ 15 ಜನ ಕ್ರೀಡಾಪಟುಗಳು ಭಾಗವಹಿಸಿ ಅದರಲ್ಲಿ 11 ಜನ ಕ್ರೀಡಾಪಟುಗಳು ವಿಜೇತರಾಗಿದ್ದರು.

ಅದರಲ್ಲಿ ಮೂರು ಜನ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು ಬೆಂಗಳೂರಿನಲ್ಲಿ ನವಂಬರ್ 22.ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ 74 ಕೆಜಿ ವಿಭಾಗದಲ್ಲಿ ವಾಲಿಭಾಷ, 59 ಕೆಜಿ ವಿಭಾಗದಲ್ಲಿ ಗಂಗಾಧರ್, 76 ಕೆಜಿ ಮಹಿಳೆಯರ ವಿಭಾಗದಲ್ಲಿ ವಿಜಯವಾಣಿ ಈ ಮೂರು ಜನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಗೆದ್ದು ಕರ್ನಾಟಕಕ್ಕೆ, ಮತ್ತು ಜಿಲ್ಲೆಗೆ ಕೀರ್ತಿ ತರಲೆಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ