ಹುತಾತ್ಮ ಯೋಧರಿಗೆ ಸಲಾಂ – ಮಿಲ್ಟ್ರಿ ಶ್ರೀ ನಿವಾಸ್.
ತರೀಕೆರೆ ನವೆಂಬರ್.25
ಜಮ್ಮು ಕಾಶ್ಮೀರದ ಪೌಂಚ್ ರಜೋರಿ ಎಂಬ ಸ್ಥಳದಲ್ಲಿ ಉಗ್ರವಾದಿಗಳೊಂದಿಗೆ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ನ ಆರು ಜನ ಸೈನಿಕರು ವೀರ ಮರಣ ಹೊಂದಿದ್ದಾರೆ ಎಂದು ತರೀಕೆರೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಿಲ್ಟ್ರಿ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಗಾಂಧಿ ವೃತ್ತದಲ್ಲಿ ಸಂಘದ ಪದಾಧಿಕಾರಿಗಳಾದ ನಿವೃತ್ತ ಕ್ಯಾಪ್ಟನ್ ಪಾಲಾಕ್ಷ, ಲ್ಯಾನ್ಸ್ ನಾಯಕ್ ದೇವೇಂದ್ರ, ವೀರರಾಜು, ಎಸ್ ಹೆಚ್ ಕುಮಾರ್, ಗೋವಿಂದರಾಜು, ಸಿದ್ದಪ್ಪ, ಸೋಮಶೇಖರ್, ಮುಂತಾದ ಮಾಜಿ ಸೈನಿಕರೊಂದಿಗೆ ಹುತಾತ್ಮರಾದ ಕರ್ನಾಟಕ ಮೂಲದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಂಜಲ್, ಉತ್ತರ ಪ್ರದೇಶ ಆಗ್ರಾದ ಕ್ಯಾಪ್ಟನ್ ಶುಭಂ ಗುಪ್ತ, ಅವಲ್ದಾರ್ ಅಬ್ದುಲ್ ಮಜೀದ್, ಉತ್ತರ ಕಾಂಡ ಲ್ಯಾನ್ಸ್ ನಾಯಕ್ ಸಂಜಯ್ ಬಿಸ್ಟ್ , ಪ್ಯಾರಾ ಟ್ರೋಪರ್ ಸಚಿನ್ ಲಾವೂರ್, ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಹಾಗೂ ಸಂಘದ ಗೌರವಾಧ್ಯಕ್ಷರಾದ ಕ್ಯಾಪ್ಟನ್ ಪಾಲಾಕ್ಷರವರು ಸಹ ಮಾತನಾಡಿದರು. ಇವರೊಂದಿಗೆ ತರೀಕೆರೆಯ ಸಾರ್ವಜನಿಕರು ಸಹ ಶ್ರದ್ಧಾಂಜಲಿ ಅರ್ಪಿಸಿದರು. ಮೌನ ಆಚರಣೆ ಮಾಡಿ ನಂತರ ಹುತಾತ್ಮ ಯೋಧರಿಗೆ ಸಲಾಂ ಎಂದು ಘೋಷಣೆ ಕೂಗಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ