ಕನ್ನಡ ಸಾಹಿತ್ಯ ಪರಿಷತ್ ಹೊಸಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನ. ನಾಡ ನುಡಿಗೆ ಕಟಿಬದ್ಧ, ರವಿಕುಮಾರ್.
ಕಾನಾ ಹೊಸಹಳ್ಳಿ ನವೆಂಬರ್.25
ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ, ಜೊತೆಗೆ ಅನೇಕ ಪೌರಾಣಿಕ ಸಾಮಾಜಿಕ ನಾಟಕಗಳಲ್ಲಿ ಅಭಿನಯ ಮಾಡುವುದು ಈಗಿನ ಯುವ ಶಕ್ತಿಗೆ ಪ್ರೇರಣೆ ನೀಡಬೇಕಾಗಿದೆ. ಮತ್ತು ಕನ್ನಡ ನಾಡು ನುಡಿ ಜಲ ಭಾಷೆ ವಿಷಯದಲ್ಲಿ ನಾವೆಲ್ಲರೂ ಕನ್ನಡಕ್ಕಾಗಿ ಕಂಕಣ ಭದ್ಧರಾಗಿ ನಿಲ್ಲಬೇಕು ಎಂದು ನಿವೃತ್ತ ಶಿಕ್ಷಕರು ಜಿ ಚಂದ್ರಪ್ಪ ತಿಳಿಸಿದರು. ಇಲ್ಲಿನ ಕಾನ ಹೊಸಹಳ್ಳಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ಕನ್ನಡ ಭವನದಲ್ಲಿ ಕವಿ ಗೋಷ್ಠಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ನಿವೃತ್ತಿ ಪ್ರಾಚಾರ್ಯರು ಶರಣಪ್ಪ ಉದ್ಘಾಟನೆಯನ್ನು ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಎಂ ರವಿಕುಮಾರ್ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಬಿಸ್ನಳ್ಳಿ ಗ್ರಾಮದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಳವಾಯಿ ಸಿದ್ದಪ್ಪ ಇವರಿಗೆ ಹೋಬಳಿ ಘಟಕದ ವತಿಯಿಂದ ಗೌರವ ಸನ್ಮಾನಿಸಲಾಯಿತು. ನಂತರ ಸನ್ಮಾನ ಸ್ವೀಕರಿಸಿ ದಳವಾಯಿ ಸಿದ್ದಪ್ಪ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮಾತನಾಡಿ ನಾನು ಅಭಿನಯಿಸಿದ ಪಾತ್ರಗಳೆಂದರೆ ವೀರ ಅಭಿಮನ್ಯು ಕಾಳಗ, ದುಶ್ಯಾಸನ ಕಥೆ, ಮೂರುವರೆ ವಜ್ರ, ಬಬ್ರುವಾಹನ ಕಾಳಗ, ದುರ್ಯೋಧನ ಗರ್ವಭಂಗ, ದೇವಿ ಮಹಾತ್ಮೆ, ವಿರಾಟ ಪರ್ವ, ಸಿರಿವಂತ ಸೇರಿದಂತೆ ಅನೇಕ ಬಯಲು ನಾಟಕಗಳು ಮತ್ತು ರಕ್ತರಾತ್ರಿ ಸೇರಿದಂತೆ ಅನೇಕ ಪೌರಾಣಿಕ ನಾಟಕಗಳನ್ನು ನಡೆಸಿದ್ದೇನೆ. ಪ್ರಸ್ತುತ ಈಗಲೂ ನಾಟಕಗಳನ್ನು ಆಡುಸುತ್ತಿದ್ದೇನೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ನಿವೃತ್ತಿ ಶಿಕ್ಷಕ ಜಿ ಚಂದ್ರಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷರಾದ ಕೆ ಜಿ ಕುಮಾರ್ ಗೌಡ, ವಕೀಲರಾದ ಟಿ ಓಂಕಾರಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ ಸುಭಾಷ್ ಚಂದ್ರ, ಹಿರಿಯರಾದ ಶರಣಗೌಡ, ಶಿಕ್ಷಕರಾದ ಸಫಾರಿ ಶಾಮಸುಂದರ್, ಡಾ.ಕರಿಬಸಪ್ಪ, ಶಿವ ಪ್ರಕಾಶ್, ಬೊಮ್ಮಯ್ಯ, ಗುರುಮೂರ್ತಿ, ಸಿದ್ದಲಿಂಗಯ್ಯ ಪೂಜಾರಿ, ಶಂಕ್ರಪ್ಪ, ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ, ಹೋಬಳಿ ಘಟಕದ ಕೋಶಾಧ್ಯಕ್ಷ ರಾಮಕೃಷ್ಣ ಸಫಾರಿ, ಕರಿ ಬಸಣ್ಣ, ಪ್ರಕಾಶ್ ಗೌಡ, ಪ್ರದೀಪ್ ಸೇರಿದಂತೆ ವಿದ್ಯಾರ್ಥಿನಿಯರು, ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ