ಗ್ರೀಕ್ ರೋಮನ್ ರು ಕಂಡು ಕೊಂಡ ಕನ್ನಡ ಭಾಷೆ, ಸಿದ್ದರಾಮ ಕಲ್ಮಠ.

ಕೊಟ್ಟೂರು ನವೆಂಬರ್.26

ಕನ್ನಡ ನಾಡು, ಭಾಷೆ, ಸಂಸ್ಕೃತಿ ಗತ ಇತಿಹಾಸವನ್ನು ಹೊಂದಿದ್ದು, ಇದರ ಪರಂಪರೆ ಉಳಿಸುವುದು ಹಾಗೂ ಕಟ್ಟುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕು. ಅಲ್ಲದೇ ಕನ್ನಡ ಇತಿಹಾಸವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ದೀರ್ಘಕಾಲಿಕ ಯೋಚನೆಯನ್ನು ಯಾರೋಬ್ಬರು ಮಾಡಿಲ್ಲದಿರಿವುದು ವಿಷಾದನೀಯ ಎಂದು ಕ.ಸಾ.ಪ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.ಇಲ್ಲಿನ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಅಯೋಜಿಸಿದ್ದ ೬೮.ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇವಲ ಭಾಷೆಗಷ್ಟೇ ಸೀಮಿತವಾಗದೇ ಶಿಲ್ಪ ಕಲೆ ಇತರೆ ಸಂಸ್ಕೃತಿಯ ಇತಿಹಾಸವನ್ನು ಹೊಂದಿದೆ ಅನೇಕ ರಾಜರ ಪೂರ್ವಿಕರ ಕಾಲದಲ್ಲಿಯೇ ಮಹತ್ವ ಹೊಂದಿದ್ದ ಕನ್ನಡ ಭಾಷೆ ಅಂದಿನಿಂದಲೇ ಅದನ್ನು ಉಳಿಸಿಕೊಂಡು ಬಂದಿದೆ .ಕನ್ನಡ ನಾಡಿನ ಇತಿಹಾಸ ಬೇರೆ ಭಾಷೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಎಲ್ಲರೂ ಅರಿತಿರಬೇಕು. ಅದರೊಂದಿಗೆ ಕನ್ನಡ ನಾಡಿನ ಮಹತ್ವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬೇಕು ಎಂದರು. ಕನ್ನಡ ನಾಡು ನುಡಿ ಮತ್ತು ಕರ್ನಾಟಕ ನಾಮಕರಣ ಮಹತ್ವ ಕುರಿತು ಮಾತನಾಡಿದ ಉಪನ್ಯಾಸಕ ಅಕ್ಕಿ ಬಸವೇಶ,  ಕನ್ನಡ ಭಾಷೆಯ ಪದ ಬಳಕೆ ಕ್ರಿ.ಶ.ಪೂರ್ವದಲ್ಲಿ ಇರುವುದಕ್ಕೆ ಇತಿಹಾಸವಿದೆ.  ಇದಕ್ಕಾಗಿ ಗ್ರೀಕ್ ಮತ್ತು ರೋಮನ್ನರು ಕನ್ನಡ ಭಾಷೆಯೊಂದಿಗೆ ಅನ್ಯೋತ್ಯತೆ ಹೊಂದಿದ್ದರು. ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕೊಟ್ಟೂರಿನಲ್ಲಿ ಮಾಜಿ ಸಚಿವ ದಿ.ಎಂಎಂಜೆ ಸದ್ಯೋಜಾತಪ್ಪ ಅವರು ದೊಡ್ಡ ಸಂಘಟನೆ ಮಾಡಿ ಕೊಂಡು ಹೋರಾಟ ನಡಸಿದ್ದು ಸ್ಮರಣೀಯವಾದುದು. ಕೊಟ್ಟೂರು ಎಲ್ಲಾ ಕ್ಷೇತ್ರದ ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ ಎಂದರು. ಜಿಲ್ಲಾ ಸಹಾಯಕ ಖಜಾನಾಧಿಕಾರಿ ಅಂಜಿನಪ್ಪ ,ನಿವೃತ್ತ ಪ್ರಾಚಾರ್ಯ ಡಾ.ಕೆ.ರೇವಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಮಾತನಾಡಿದರು.ಕಸಾಪ ತಾಲೂಕು ಘಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಂಗ ನಿರ್ದೇಶಕ ಎನ್.ವಿ.ಶ್ರೀಕಾಂತ, ರಾಜೇಶ್ ಕರ್ವಾ, ಕನ್ನಹಳ್ಳಿ ರೇಣುಕ ವಾಮದೇವ, ಸುಟ್ಟಕೋಡಿಹಳ್ಳಿ ಚೌಡಪ್ಪ, ಉತ್ತಂಗಿ ಕೊಟ್ರೇಶ್, ಈಶ್ವರಪ್ಪ ತುರುಕಾಣಿ, ಹರ್ಷ , ವೀರಭದ್ರಪ್ಪರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪಿ ಶ್ರೀಧರ ಶೆಟ್ಟಿ , ಡಾ.ರವಿಕುಮಾರ್, ಪ್ರಶಾಂತ್ ಕುಮಾರ್, ಎಸ್,ಎಂ.ಗುರುಪ್ರಸಾದ್,ಕೋರಿ ಬಸವರಾಜ್, ಜಗದೀಶ್ ನಾಯ್ಕ, ಬಂಜಾರ್ ನಾಗರಾಜ, ಬಿಎಂ. ಗಿರೀಶ್ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಇದ್ದರು. ಉಪನ್ಯಾಸಕ ಅರವಿಂದ ಬಸಾಪುರ ಸ್ವಾಗತಿಸಿದರು. ಶಿಕ್ಷಕ ಅಜ್ಜಪ್ಪ ವಂದಿಸಿದರು. ಈಶ್ವರಪ್ಪ ತುರುಕಾಣಿ ನಿರೂಪಿಸಿದರು. ಇದಕ್ಕೂ ಮೊದಲು ರಾಜ್ಯೋತ್ಸವ ನಿಮಿತ್ತ ಭುವನೇಶ್ವರಿ ದೇವಿಯ ಭಾವ ಚಿತ್ರ ಮೆರವಣಿಗೆ ವಿವಿದ ಕಲಾ ತಂಡಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಮತ್ತಿತರು ಪಾಲ್ಗೊಳ್ಳುವಿಕೆಯಲ್ಲಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ವಿಜೃಂಭಣಿಯಿಂದ ನಡೆಯಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button