ತಾಯಿ ಪ್ರೀತಿಗ ತಂದೆ ನೀತಿಗೆ…..
ತಾಯಿಯೇ ಮೊದಲ ಗುರು
ಹರಿಸಿದರು ತಂದೆ ಬೆವರು
ತಾಯಿ ಪ್ರೀತಿಗೆ ಸಮನ್ಯಾರು
ತಂದೆಗಿಂತ ಹೀರೋ ಇನ್ಯಾರು
ಕಂಡರು ತಾಯಿ ದೇವರಾಗಿ
ಬೆಳಸಿದರು ತಂದೆ ರಾಜನಾಗಿ
ಆದಳು ತಾಯಿಯು ಮಹಾತ್ಯಾಗಿ
ಆದಾಗ ತಂದೆಯು ಕಾಯಕಯೋಗಿ
ಅತ್ತಾಗ ತಾಯಿ ನೀಡಿದಳು ಮುತ್ತು
ಆ ಕ್ಷಣವೇ ತಂದೆ ನೀಡಿದನು ತುತ್ತು
ಗಂಡು ಮಕ್ಕಳಿಗೆ ತಾಯಿಯೇ ಸೂಪರ್ ಸ್ಟಾರ್
ಹೆಣ್ಣು ಮಕ್ಕಳಿಗೆ ತಂದೆಯೇ ರಿಯಲ್ ಸ್ಟಾರ್
ತಿಳಿಯಿರಿ ತಾಯಿ ಮೇಲಲ್ಲ
ಅರಿಯಿರಿ ತಂದೆ ಕೀಳಲ್ಲ
ಗಾದೆ ತಾಯಿಗಿಂತ ಬಂಧುವಿಲ್ಲ
ವೇದ ಹೇಳಿತು ತಂದೆಗಿಂತ ದೇವರಿಲ್ಲ
ತುತ್ತು ನೀಡಿ ಹಾಡಿದಳು ತಾಯಿ ಜೋಗುಳ
ನಮಗಾಗಿ ತಂದೆಯು ಉಂಡನು ತಂಗಳ
ತಾಯಿ ಹಾಡಿದರು ಬಾಲ್ಯದಲಿ ಲಾಲಿ
ತಂದೆ ಮಾಡಿದರು ಪ್ರತಿದಿನ ಕೂಲಿ
ತಾಯಿ ಪದಗಳಿಗೆ ಸಿಗದವಳು
ಹಸನಾಗಿಸಿದರು ತಂದೆಯು ಬಾಳು
ಮುಕ್ಕೋಟಿ ದೇವರಿಗೆ ತಾಯಿ ಸಮಾನ
ಮಕ್ಕಳೆಂದರೆ ತಂದೆಗೆ ಎಲ್ಲಿಲ್ಲದ ಅಭಿಮಾನ
ಕಟ್ಟಿದಳು ತಾಯಿ ತೊಟ್ಟಿಲು
ಸ್ಫೂರ್ತಿಯಾದರು ತಂದೆ ಬದುಕಲು
ಸ್ವರ್ಗಕ್ಕೆ ಸಮಾನ ತಾಯಿಯ ಮಡಿಲು
ದೇವಸ್ಥಾನದ ಗರ್ಭಗುಡಿ ತಂದೆಯ ಹೆಗಲು
ತಾಯಿ ತಾನೆ ಮನದ ದೇವರು
ಬೆನ್ನೆಲುಬಾಗಿ ತಂದೆ ಸದಾ ನಿಂತರು
ಅವರಿಬ್ಬರೂ ಕಣ್ಣಿಗೆ ಕಾಣುವ ದೇವರು
ಪ್ರತಿ ಮಗುವಿನ ಹೃದಯದ ಉಸಿರು
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು, ಹಿರೇಮಾಗಿ )
ಬಾಗಲಕೋಟ
Mob-9845568484