ಅರಿವು ಕೇಂದ್ರದಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ.
ಹೂಡೇಂ ನವೆಂಬರ್.27

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧನೆ ಮಾಡಲಾಯಿತು. ಈ ವೇಳೆ ಸಂವಿಧಾನ ಪೀಠಿಕೆಯನ್ನು ಗ್ರಂಥಪಾಲಕರು ತುಡುಮ ಗುರುರಾಜ್ ಭೋದಿಸಿದರು. ಹಿರಿಯ ಪತ್ರಕರ್ತರಾದ ಹೂಡೇಂ ಕೃಷ್ಣಮೂರ್ತಿ ಅವರು ಮಾತನಾಡಿ ನವಂಬರ್ 26 ಸಂವಿಧಾನ ಸಮರ್ಪಣೆಯಾದ ದಿನ ನಮಗೆಲ್ಲ ಸಂಭ್ರಮದ ಹಬ್ಬ ಈ ಹಬ್ಬವನ್ನು ನಾವೆಲ್ಲ ಸಡಗರದಿಂದ ಆಚರಿಸಬೇಕೆಂದು ತಿಳಿಸಿದರು ಹಾಗೂ ಗ್ರಂಥಪಾಲಕರು ಪ್ರತಿಯೊಂದು ಕಾರ್ಯಕ್ರಮಗಳನ್ನು ಪ್ರತಿಯೊಂದು ಶಾಲೆಗಳಿಗೂ ಹೋಗಿ ಎಲ್ಲಾ ವಿಷಯಗಳನ್ನು ಮನ ಮುಟ್ಟಿಸಿ ಲವ ಲವಿಕೆಯಿಂದ ಕ್ರಿಯಾಶೀಲರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು ಎಂದು ತಿಳಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರಪ್ಪ, ಕಾರ್ಯದರ್ಶಿ ಎಂ ಟಿ ತಿಪ್ಪೇರುದ್ರಪ್ಪ, ಬಿಲ್ ಕಲೆಕ್ಟರ್ ಮಂಜಣ್ಣ, ಹಿರಿಯ ಓದುದರಾದ ಪೂಜಾರಿ ಪಾಲಯ್ಯ, ಶ್ರೀನಿವಾಸ್, ಕಾಯಕ ಮಿತ್ರ ಗಂಗಮ್ಮ, ಗ್ರಾಮ ಪಂಚಾಯತಿ ಸದಸ್ಯರು ಕಾಟಯ್ಯ, ಗ್ರಂಥಾಲಯ ಓದುಗರು, ಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ