ಗೌರಿ ಗಣೇಶ ಹಬ್ಬದ ಅಂಗವಾಗಿ ಸರ್ವೇಶ್ವರ ಮಠದಲ್ಲಿ 101 ಸುಮಂಗಲೆಯರಿಗೆ – ಹುಡಿ ತುಂಬುವ ಕಾರ್ಯಕ್ರಮ.
ತುರವಿಹಾಳ ಆ.28

ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಶ್ರೀ ಸರ್ವೇಶ್ವರ ಮಠದಲ್ಲಿ ಶ್ರೀ ಗುಂಡಯ್ಯ ಅಪ್ಪಾಜಿ ಅವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ 101 ಸುಮಂಗಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಂಗಳವಾರ ಸಾಯಂಕಾಲ ಸರ್ವೇಶ್ವರ ಮಠದಲ್ಲಿ ಶ್ರೀ ಗುರು ಗುಂಡಯ್ಯ ಅಪ್ಪಾಜಿಯವರು ಸುಮಾರು 101 ಎಲ್ಲಾ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಯಕ್ರಮ ನಡೆದ ನಂತರ ಐದು ಜನ ಮಹಿಳಾ ಹಿರಿಯರಿಗೆ ಮಠದ ವತಿಯಿಂದ ಗುರು ಗುಂಡಯ್ಯ ಅಪ್ಪಾಜಿ ಅವರು ಸನ್ಮಾನ ಮಾಡಿದರು.

ಈ ಸಂಧರ್ಭದಲ್ಲಿ M.R ಉಮಾದೇವಿ, ಮಾದೇವಮ್ಮ ಅಮ್ಮನವರು,ಶ್ರೀಮತಿ ಶಾರದಮ್ಮ,ಶ್ರೀಮತಿ ವಿಶಲಾಕ್ಷಿ, ಶ್ರೀಮತಿ ಗೀತಾ ಇವರಿಗೆ ಅಪ್ಪಾಜಿ ಅವರಿಂದ ಸನ್ಮಾನ ಮಾಡಲಾಯಿತು. ತದನಂತರ ಆರ್ಯವೈಶ್ಯ ಮಹಿಳಾ ಮಂಡಳಿ ಸಮಾಜದವರು ಶ್ರೀ ಶ್ರೀ ಗುರು ಗುಂಡಯ್ಯ ಅಪ್ಪಾಜಿ ಅವರಿಗೂ ಮತ್ತು ಶ್ರೀ ಮಂಜಯ್ಯ ಅಪ್ಪನವರಿಗೂ ಸನ್ಮಾನ ಮಾಡಿದರು.ಈ ಸಂಧರ್ಭದಲ್ಲಿ ಊರಿನ ಹಿರಿಯರು, ಮಹಿಳೆಯರು, ಶ್ರೀ ಮಠದ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು.